ಕೋಟ : ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಶಂಕ ತೀರ್ಥ ಕೆರೆ ಎದುರು ನೂತನವಾಗಿ ಪುನಃ ನಿರ್ಮಾಣಗೊಂಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃ ಪ್ರತಿಷ್ಠೆ ಮೇ 13ರಂದು ಜರಗಿತು.
ಈ ಪ್ರಯುಕ್ತ ವೇ| ಮೂ| ಯಜ್ಞನಾರಾಯಣ ಸೋಮಯಾಜಿ, ಅನಂತಪದ್ಮನಾಭ ಐತಾಳ
ಅವರ ನೇತೃತ್ವದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗಿತು.
ಆಡಳಿತ ಮಂಡಳಿ ಅಧ್ಯಕ್ಷ ಎಚ್.ನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ಬಾಲಕೃಷ್ಣ ನಕ್ಷತ್ರಿ, ಕೋಶಾಧಿಕಾರಿ ರಾಮದಾಸ ಭಟ್ ಹಾಗೂ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ನಾಗೇಶ ಶ್ಯಾನುಭಾಗ್, ಕಾರ್ಯದರ್ಶಿ ರಘು ಮಧ್ಯಸ್ಥ, ಕೋಶಾಧಿಕಾರಿ ಅನಂತಪದ್ಮನಾಭ ಐತಾಳ ನೇತೃತ್ವ ವಹಿಸಿದ್ದರು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.