Home ಧಾರ್ಮಿಕ ಸುದ್ದಿ ಸಜೀಪಮೂಡ: ಪೂಜೆ, ದೈವಗಳಿಗೆ ಪಂಚಪರ್ವ ಸೇವೆ

ಸಜೀಪಮೂಡ: ಪೂಜೆ, ದೈವಗಳಿಗೆ ಪಂಚಪರ್ವ ಸೇವೆ

1105
0
SHARE

ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಶ್‌ನಗರದ ಶ್ರೀ ಪಂಚಶಕ್ತಿ ಆರಾಧನಾ ಸೇವಾ ಸಮಿತಿ ಆಶ್ರಯದಲ್ಲಿ ಕ್ಷೇತ್ರದ 10ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಗಾಯತ್ರಿ ಪೂಜೆ, ಪರಿವಾರ ದೈವ ಗಳಿಗೆ ಪಂಚಪರ್ವ ಸೇವೆ ಮಾ. 31ರಂದು ವಿಜೃಂಭಣೆಯಿಂದ ನಡೆಯಿತು.

ತಾ.ಪಂ. ಸದಸ್ಯ ಸಂಜೀವ ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಕೆ. ಸಂಜೀವ ಪೂಜಾರಿ, ಅಧ್ಯಕ್ಷ ಕ್ಯಾ| ಪ್ರಕಾಶ್‌, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ನಾಗೇಶ್‌ ಪೂಜಾರಿ, ಕಾರ್ಯದರ್ಶಿ ಜಗದೀಶ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಭಜನೆ, ಶ್ರೀದೇವಿಗೆ ಪುಷ್ಪಾ ಲಂಕಾರ ಪೂಜೆ, ಧೂಮಾವತಿ ಬಂಟ, ಕ್ಷೇತ್ರಪಾಲ ದೈವಗಳಿಗೆ ಪಂಚಪರ್ವ ಸೇವೆ, ರಾತ್ರಿ ಗುಳಿಗ ದೈವದ ಗಗ್ಗರ ಸೇವೆ ನಡೆಯಿತು.

ವಿವಿಧ ಧಾರ್ಮಿಕ ವಿಧಿ ವಿಧಾನ
ಶ್ರೀ ದೇವಿ ಸನ್ನಿಧಿಯಲ್ಲಿ ವೇ| ಮೂ| ಕೊಳಕೆ ವಿಷ್ಣುಮೂರ್ತಿ ಮಯ್ಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬೆಳಗ್ಗೆ 8 ನಾರಿಕೇಳ ಗಣಪತಿ ಹೋಮ, ತೋರಣ ಮುಹೂರ್ತ ಹಾಗೂ ಭಜನ ಕಾರ್ಯಕ್ರಮ ನಡೆಯಿತು. ಗಾಯತ್ರಿ ಪೂಜೆ ನಡೆದು ಮಹಾಮಂಗಳಾರತಿ, ದೈವಗಳಿಗೆ ಪಂಚಪರ್ವ ಸೇವೆ, ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here