Home ಧಾರ್ಮಿಕ ಸುದ್ದಿ ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ

ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ

ಸಜೀಪ ಮಾಗಣೆ ಭಂಡಾರದ ಮನೆ

1260
0
SHARE
ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದರು.

ಬಂಟ್ವಾಳ: ಸಜೀಪಮೂಡ ಗ್ರಾಮ ಸಂಕೇಶ ಸಜೀಪ ಮಾಗಣೆ ನಡಿಯೇಲು ದೈಯಂಗಳು ಉಳ್ಳಾಲ್ತಿ ಅಮ್ಮ ಮತ್ತು ನಾಲ್ಕೈತ್ತಾಯ ದೈವಗಳ ಭಂಡಾರದ ಮನೆಯ 1 ಕೋಟಿ ರೂ. ವೆಚ್ಚದ ನೂತನ ಗೋಪುರ ನಿರ್ಮಾಣಕ್ಕೆ ಜೂ. 28ರಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಶಿಲಾನ್ಯಾಸ ಮಾಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ, ಸಜೀಪ ಮಾಗಣೆಯ ಮುಖ್ಯಸ್ಥ ಬಿ. ಸದಾನಂದ ಪೂಂಜ, ಗಡಿ ಪ್ರಧಾನರಾದ ಕಾಂತಾಡಿಗುತ್ತು ಬರಂಗರೆ ಗಣೇಶ ನಾಯ್ಕ ಯಾನೆ ಉಗ್ಗ ಶೆಟ್ಟಿ, ಸಜೀಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಜತೆಯಾಗಿ ದೀಪ ಬೆಳಗಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಕಾಂತ ಶೆಟ್ಟಿ ಸಂಕೇಶ, ಪ್ರಮುಖರಾದ ಎಂ. ಸುಬ್ರಹ್ಮಣ್ಯ ಭಟ್, ವೆಂಕಟೇಶ್‌ ಭಟ್, ಜಯಶಂಕರ ಬಾಸ್ರಿತ್ತಾಯ, ನಗ್ರಿಗುತ್ತು ಜಯರಾಮ ಶೆಟ್ಟಿ, ಸಂಕಪ್ಪ ಶೆಟ್ಟಿ ಪಾಲಮಂಟಪ ಮನೆ, ಬಿಜಾಂದರ್‌ ಗುತ್ತು ಶಿವರಾಮ ಭಂಡಾರಿ, ಯಶವಂತ ದೇರಾಜೆ, ದೇವಿಪ್ರಸಾದ ಪೂಂಜ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರು ಸ್ವಾಗತಿಸಿ, ಶಿವಪ್ರಸಾದ್‌ ಮಾಸ್ಟರ್‌ ವಂದಿಸಿದರು.

LEAVE A REPLY

Please enter your comment!
Please enter your name here