Home Uncategorized ಸಜಂಕಾಡಿ: ಮಹಮ್ಮಾಯಿ ಮಾರಿಯಮ್ಮ ದೇವಿಗೆ ಮಹಾಪೂಜೆ

ಸಜಂಕಾಡಿ: ಮಹಮ್ಮಾಯಿ ಮಾರಿಯಮ್ಮ ದೇವಿಗೆ ಮಹಾಪೂಜೆ

1986
0
SHARE

ಪಡುವನ್ನೂರು : ಬಡಗನ್ನೂರು ಪಂಚಾಯತ್‌ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸಜಂಕಾಡಿ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಿ ಮತ್ತು ಪರಿವಾರ ದೈವಗಳ ಮಹಾಪೂಜೆ ಗುರುವಾರ ದೈವಸ್ಥಾನದಲ್ಲಿ ನಡೆಯಿತು.

ಪ್ರಾತಃಕಾಲ ದೈವಗಳಿಗೆ ಬಿಂದು ಕೊಡುವುದು, ಮಹಾಪೂಜೆ, ಹರಿಕೆ ಕಾಣಿಕೆ ಸ್ವೀಕಾರ, ಪ್ರಸಾದ ವಿತರಣೆ, ಅಪರಾಹ್ನ ಅನ್ನ ಸಂತರ್ಪಣೆ ನಡೆಯಿತು. ಬಳಿಕ ದೈವಗಳ ಭಂಡಾರವನ್ನು ಸ್ವಸ್ಥಾನದಲ್ಲಿ ಇಡಲಾಯಿತು.

ಬಡಗನ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ಎಸ್‌., ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸವಿತಾ ಮಂಡ್ಯಲಮೂಲೆ, ನೆ. ಮೂಟ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮ ಮೇನಾಲ, ಆಡಳಿತ ಮೊಕ್ತೇಸರ ಸಾಂತಪ್ಪ ಎಸ್‌., ಪೂಜಾ ಸಮಿತಿ ಅಧ್ಯಕ್ಷ ರಾಘವ ಎಸ್‌., ಉಪಾಧ್ಯಕ್ಷ ಬಾಬು ಎಸ್‌., ಕಾರ್ಯದರ್ಶಿಗಳಾದ ಶ್ರೀನಿವಾಸ ಕೆ., ವಾಮನ, ಯೋಗೀಶ, ಮಹಿಳಾ ಸಮಿತಿ ಅಧ್ಯಕ್ಷರಾದ ಬೇಬಿ ಎಸ್‌., ಶಶಿಕಲಾ, ಉಪಾಧ್ಯಕ್ಷರಾದ ಭಾಗಿ, ಪೂವಮ್ಮ, ಬೇಬಿ ಬಜ, ಕಾರ್ಯದರ್ಶಿಗಳಾದ ಉಷಾ, ರಮ್ಯಾ, ಜತೆ ಕಾರ್ಯದರ್ಶಿಗಳಾದ ಲೀಲಾ, ವಾಮನ, ಸರೋಜಿನಿ, ಸ್ಥಳೀಯರಾದ ಬಾಬು ಮಾಸ್ಟರ್‌ ಸಜಂಕಾಡಿ, ಸಂತೋಷ್‌ ಆಳ್ವ ಪಡುಮಲೆ, ಪ್ರಮೋದ್‌ ಪಕಳ ಕುದಾRಡಿ, ಲೋಕೇಶ್‌ ರೈ ಸಜಂಕಾಡಿ, ವಿಶ್ವನಾಥ ರೈ ಕುತ್ಯಾಳ ಹಾಗೂ ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here