Home ಧಾರ್ಮಿಕ ಸುದ್ದಿ ಸಂತ ದೊಮಿನಿಕ್‌ ದೇವಾಲಯ ವಾರ್ಷಿಕ ದಿನಾಚರಣೆ, ಬಲಿಪೂಜೆ

ಸಂತ ದೊಮಿನಿಕ್‌ ದೇವಾಲಯ ವಾರ್ಷಿಕ ದಿನಾಚರಣೆ, ಬಲಿಪೂಜೆ

1606
0
SHARE

ಮಹಾನಗರ: ಅಶೋಕ ನಗರ ಸಂತ ದೊಮಿನಿಕ್‌ ದೇವಾಲಯದ ವಾರ್ಷಿಕ ದಿನಾಚರಣೆ ಇತ್ತೀಚೆಗೆ ಜರಗಿತು.

ಬಲಿಪೂಜೆಯ ಮೂಲಕ ದೇವರಿಗೆ ಆರಾಧನೆ ಸಲ್ಲಿಸಲಾಯಿತು. ಮಂಗ ಳೂರಿನ ಧರ್ಮಕ್ಷೇತ್ರದ ವಿಕಾರ್‌ ಜನ ರಲ್ ವಂ| ಮ್ಯಾಕ್ಸಿಮ್‌ ನೊರೊನ್ಹಾ ಅವರು ನೆರೆದಿದ್ದ ಸಮಸ್ತ ಬಾಂಧವರಿಗೆ ಶುಭಸಂದೇಶವನ್ನು ನೀಡಿದರು.

ಬಲಿಪೂಜೆಯಲ್ಲಿ ಚರ್ಚಿನ ಧರ್ಮ ಗುರುಗಳಾದ ವಂ| ಆಕ್ವಿನ್‌ ನೊರೊನ್ಹಾ, ವಂ| ಪ್ರತೀಕ್‌ ಪಿರೇರ, ವಂ| ವಿನ್ಸೆಂಟ್ರವರು ಉಪಸ್ಥಿತರಿದ್ದರು. ಬಲಿಪೂಜೆಯ ಅಂತ್ಯದಲ್ಲಿ ಧರ್ಮಕೇಂದ್ರದ ಪಾಲನಾ ಸಮಿತಿಯ ಕಾರ್ಯದರ್ಶಿ ಐಸಾಕ್‌ ಪುರ್ಟಾಡೋ ಅವರು ವಾರ್ಷಿಕ ವರದಿ ವಾಚಿಸಿದರು.

ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವಸಬ ಲೀಕರಣ ಮತ್ತು ಕ್ರೀಡಾಭಿವೃದ್ಧಿ ನಿರ್ದೇಶಕ ಪ್ರದೀಪ್‌ ಡಿ’ಸೋಜಾ ಆಗಮಿಸಿದ್ದರು. ವಂ| ಆಕ್ವಿನ್‌ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು.

ಧರ್ಮಕೇಂದ್ರದ ಪಾಲನಾ ಸಮಿತಿಯ ಉಪಾಧ್ಯಕ್ಷ ರಿಚ್ಚರ್ಡ್‌ ಗೊನ್ಸಾಲ್ವಿಸ್‌ ಸ್ವಾಗತಿಸಿದರು. ಕಾರ್ಯದರ್ಶಿ ಐಸಾಕ್‌ ಪುರ್ಟಾಡೋ ವಂದಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಐಸಿ ಲೋಬೋ ನಡೆಸಿದರು. ಸುಜಾತಾ ಮೆಂಡೊಸ್ಸಾ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ರಿಸ್ಸ್ ಕ್ರಾಸ್ತಾ, ಜೀನ್‌ ಲೋಬೋ ನಿರೂಪಿಸಿದರು.

LEAVE A REPLY

Please enter your comment!
Please enter your name here