Home ಧಾರ್ಮಿಕ ಕಾರ್ಯಕ್ರಮ ಅನುಕಂಪ ತೋರಲು ವಂ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಕರೆ

ಅನುಕಂಪ ತೋರಲು ವಂ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಕರೆ

ಸಂತ ಆಂತೋನಿ ಅವರ ವಾರ್ಷಿಕ ಮಹೋತ್ಸವ, ಹೊಸ ಕಟ್ಟಡಕ್ಕೆ ಶಿಲಾನ್ಯಾಸ

455
0
SHARE

ಮಹಾನಗರ: ಸಂತ ಆಂತೋನಿ ಅವರ ವಾರ್ಷಿಕ ಮಹೋತ್ಸವ ಬುಧವಾರ ಇಲ್ಲಿ ಮಿಲಾಗ್ರಿಸ್‌ ಚರ್ಚ್‌ ನಲ್ಲಿ ಜರಗಿತು. ಮಂಗಳೂರಿನ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಪ್ರಧಾನ ಬಲಿಪೂಜೆ ಅರ್ಪಿಸಿದರು. ಅವರು ತಮ್ಮ ಸಂದೇಶದಲ್ಲಿ ಸಂತ ಆಂತೋನಿ ಅವರಂತೆ ಜನರಲ್ಲಿ ಅನುಕಂಪ ತೋರುವಂತೆ ಕರೆ ಕೊಟ್ಟರು.

ಸಂತ ಆಂತೋನಿ ಅವರು ಜೀವಿಸಿದ್ದು ಕೇವಲ 36 ವರುಷ. ಆದರೆ ಅವರ ಅಲ್ಪಾವಧಿಯ ಸ್ನೇಹಮಯೀ ಜೀವನ ಸ್ಮರಣೀಯ ಹಾಗೂ ಅನುಕರಣೀಯ. ದೇವರು ಅವರಿಗೆ ನೀಡಿದ ಪ್ರವಚನ ಮತ್ತು ಪವಾಡ ಮಾಡುವ ವಿಶೇಷ ಶಕ್ತಿಯನ್ನು ತನಗೋಸ್ಕರ ಕಿಂಚಿತ್ತೂ ಉಪಯೋಗಿಸದೆ ಜನರ ಏಳಿಗೆ ಮತ್ತು ಒಳಿತಿಗಾಗಿ ವಿನಿಯೋಗಿಸಿದರು. ಅವರು ಇಹಲೋಕ ತ್ಯಜಿಸಿ ಎಂಟು ಶತಮಾನಗಳು ಕಳೆದರೂ ಪ್ರಪಂಚದೆಲ್ಲೆಡೆ ಜನರು ತಮ್ಮ ಕಷ್ಟ-ಸಂಕಷ್ಟಗಳನ್ನು ಸಂತ ಆಂತೋನಿ ಬಳಿ ತೋಡಿಕೊಳ್ಳುತ್ತಾರೆ. ಸಂತ ಆಂತೋನಿ ದೇವರಲ್ಲಿ ಕೋರಿಕೆ ಮಂಡಿಸಿ ಭಕ್ತರ ಆಶೋತ್ತರಗಳನ್ನು ಈಡೇರಿಸುತ್ತಾರೆ ಎಂದು ವಿವರಿಸಿದರು. ಸಂತ ಆಂತೊನಿಯವರ ಹಬ್ಬವನ್ನು ಆಚರಿಸುವಾಗ ಅವರ ಮೂಲಕ ಪಡೆದ ಆಶೀರ್ವಾದಗಳನ್ನು ಅಗತ್ಯವಿರುವ ಇತರರಲ್ಲಿ ಹಂಚಿ ಕೊಳ್ಳಬೇಕು ಎಂದು ಬಿಷಪ್‌ ಹೇಳಿದರು.

ಬೆಳಗ್ಗೆ 10.30ಕ್ಕೆ ಬಿಷಪರು ಜಪ್ಪು ಸಂತ ಆಂತೋನಿ ಆಶ್ರಮದಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿದರು. ಬಲಿಪೂಜೆಯ ಬಳಿಕ ಪುಣ್ಯ ಕ್ಷೇತ್ರದ 120ನೇ ವರ್ಷದ ಸವಿನೆನಪಿಗಾಗಿ
ಮನೋರೋಗಿಗಳಿಗಾಗಿ ನಿರ್ಮಿಸಲಿರುವ 100 ಹಾಸಿಗೆಯ ಸುಸಜ್ಜಿತ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದರು. ಮುಖ್ಯ
ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ನೂತನ ಕಟ್ಟಡದ ನೀಲ ನಕಾಶೆಯನ್ನು ಅನಾವರಣ ಮಾಡಿದರು. ಇದೇ ಸಂದರ್ಭ ಸರಕಾರದ
ವತಿಯಿಂದ 5 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.

ನಾಟಕ ಪ್ರದರ್ಶನ:
ಬಳಿಕ ‘ಮೊಗಾಚಿ ಲಾರಾಂ’ ಖ್ಯಾತಿಯ ವಿನ್ಸೆಂಟ್‌ ಫೆರ್ನಾಂಡಿಸ್‌ ಅವರು ರಚಿಸಿದ ಮತ್ತು ಜೋನ್‌ ಎಂ. ಪೆರ್ಮನ್ನೂರು ಅವರು ಬರೆದು ನಿರ್ದೇಶಿಸಿದ ‘ಸಾಂತ್‌
ಆಂತೊನ್‌ ಅಚರ್ಯಾಂಚೊ ಸಾಂತ್‌ (ಪವಾಡ ಪುರುಷ ಸಂತ ಆಂತೋನಿ) ಕೊಂಕಣಿ ನಾಟಕ ಪ್ರದರ್ಶಿಸಿದರು. ಸಂತ ಆಂತೋನಿ ಆಶ್ರಮದ ನಿರ್ದೇಶಕ ವಂ| ಒನಿಲ್‌ ಡಿ’ಸೋಜಾ, ಸಹ ಗುರುಗಳಾದ ವಂ| ಫ್ರಾನ್ಸಿಸ್‌ ಡಿ’ಸೋಜಾ ಮತ್ತು ವಂ| ತ್ರಿಶಾನ್‌ ಡಿ’ಸೋಜಾ ಅವರು ಉಪಸ್ಥಿತರಿದ್ದರು. ಎಲ್ಲ ಭಕ್ತಾದಿಗಳ ಮೇಲೆ ದೇವರ ಆಶೀರ್ವಾದ ಕೋರಿದರು. ಮೂರು ಸಾವಿರಕ್ಕೂ ಅಧಿಕ ಜನರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಮಿಲಾಗ್ರಿಸ್‌ ಚರ್ಚ್‌ನಲ್ಲಿ ಬಲಿ ಪೂಜೆ:
ಬೆಳಗ್ಗೆ 8.15 ಗಂಟೆಗೆ ಧರ್ಮ ಪ್ರಾಂತದ ಪ್ರಧಾನ ಗುರು ವಂ| ಡೆನಿಸ್‌ ಮೊರಾಸ್‌ ಪ್ರಭು ಅವರು ಮಿಲಾಗ್ರಿಸ್‌ ಚರ್ಚ್‌ನಲ್ಲಿ ಹಬ್ಬದ ಮೊದಲ ಬಲಿ ಪೂಜೆ ಅರ್ಪಿಸಿದರು. ಸಂಜೆ 4.30ಕ್ಕೆ ವಂ| ಜೇಕಬ್‌ ಮಿಲ್ಟನ್‌ ಮಲಯಾಳ ಭಾಷೆಯಲ್ಲಿ ಬಲಿ ಪೂಜೆ ನಡೆಸಿದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here