Home ಧಾರ್ಮಿಕ ಕಾರ್ಯಕ್ರಮ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನ: ಕಾಶೀ ಶ್ರೀಗಳಿಂದ ಸಹಸ್ರ ಕುಂಭಾಭಿಷೇಕ

ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನ: ಕಾಶೀ ಶ್ರೀಗಳಿಂದ ಸಹಸ್ರ ಕುಂಭಾಭಿಷೇಕ

1591
0
SHARE

ಬ್ರಹ್ಮಾವರ : ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದಲ್ಲಿ ಶನಿವಾರ ತಂತ್ರಸಾರ ರೀತ್ಯಾ ಸಹಸ್ರ ಕುಂಭಾಭಿಷೇಕ ಜರಗಿತು. ಶ್ರೀ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ದೇವರಿಗೆ ತಂತ್ರಸಾರರೀತ್ಯಾ ಸಹಸ್ರ ಕುಂಭಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಪ್ರಸನ್ನಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಸಂಜೆ ಕಲಾಕೋಸ್ಟ ಗ್ಲೋಬಲ್‌ ಮ್ಯೂಸಿಕ್‌ ಮತ್ತು ಆರ್ಟ್‌ ಚಾರಿಟೆಬಲ್‌ ಟ್ರಸ್ಟ್‌ ನಿಂದ ಭಜನೆ, ರಾತ್ರಿ ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ ಜರಗಿತು.

ಆಡಳಿತ ಮೊಕ್ತೇಸರ ಅಮ್ಮುಂಜೆ ಯಶವಂತ ನಾಯಕ್‌, ಮೊಕ್ತೇಸರರಾದ ಅಮ್ಮುಂಜೆ ನರಸಿಂಹ ನಾಯಕ್‌, ಅಮ್ಮುಂಜೆ ನಾಗೇಂದ್ರ ನಾಯಕ್‌, ಅಮ್ಮುಂಜೆ ಸುಬ್ರಾಯ ಮುಕುಂದ ನಾಯಕ್‌, ಅಮ್ಮುಂಜೆ ಗುರುಪ್ರಸಾದ್‌ ಆರ್‌. ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು. ಜ. 24ರಿಂದ ಜ. 27ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here