Home ಧಾರ್ಮಿಕ ಸುದ್ದಿ ತ್ಯಾಗ-ಸೇವೆಯಿಂದ ಜಗತ್ತಿಗೆ ಬೆಳಕಾಗಿ: ಮಾಣಿಲ ಶ್ರೀ

ತ್ಯಾಗ-ಸೇವೆಯಿಂದ ಜಗತ್ತಿಗೆ ಬೆಳಕಾಗಿ: ಮಾಣಿಲ ಶ್ರೀ

1633
0
SHARE

ವಿಟ್ಲ ಫೆ. 20: ತ್ಯಾಗ ಮತ್ತು ಸೇವೆಯ ಮೂಲಕ ಜಗತ್ತಿಗೆ ಬೆಳಕಾಗಬೇಕು. ಆದುದರಿಂದ ಸನಾತನ ಸಂಸ್ಕೃತಿಯನ್ನು ಉಳಿಸುವ ಸಂತರನ್ನು ಗೌರವದಿಂದ ಕಾಣುವುದು ಧರ್ಮವಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಶ್ರೀಧಾಮದ ಶ್ರೀ ನಿತ್ಯಾನಂದ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಾಗಮಂಡಲದ ಪ್ರಯುಕ್ತ ಏರ್ಪಡಿಸಿದ ಶ್ರೀನಿವಾಸ ಕಲ್ಯಾ ಣದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತ ನಾಡಿ, ಧರ್ಮ ಕ್ಷೇತ್ರ ಬೆಳಗುತ್ತಿದ್ದರೆ, ಊರಿಗೆ ಸಮಾ ಜಕ್ಕೆ ಶ್ರೇಯಸ್ಸು ಎಂದರು.

ಬಾಚಕೆರೆ ಶ್ರೀಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನ ಅಧ್ಯಕ್ಷ ಪುರು ಷೋತ್ತಮ ಕುಲಾಲ್‌ ಕಲಾವಿ, ಮಾಣಿಲ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲು, ಉದ್ಯಮಿ ಸುಭಾ ಶ್ಚಂದ್ರ ನಾಯಕ್‌, ಗಿರೀಶ್‌ ಸಾಲ್ಯಾನ್‌, ಮಂಚಿ ಧರ್ಮ ಜಾಗರಣ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್‌, ವಿಟ್ಲ ಮಂಗೇಶ ಭಟ್‌, ಚಂದ್ರಶೇಖರ ಮೂಲ್ಯ ದುಬೈ, ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕಾರ್ಯದರ್ಶಿ ಜಿತೇಂದ್ರ ಸಾಲ್ಯಾನ್‌ ಬಿ.ಸಿ. ರೋಡ್‌ ಉಪಸ್ಥಿತರಿದ್ದರು.

ದಾಮೋದರ ಬಿ.ಎಂ. ಮಾರ್ನ ಬೈಲು ಸ್ವಾಗತಿಸಿದರು. ಟ್ರಸ್ಟಿ ಪುರುಷೋತ್ತಮ ಚೇಂಡ್ಲ ಪ್ರಸ್ತಾವಿಸಿದರು. ಪ್ರಚಾರ ಸಮಿತಿ ಸಂಚಾಲಕ ಪುಷ್ಪರಾಜ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ ನಿರೂಪಿಸಿದರು. ಬೆಳಗ್ಗೆ ಕಟೀಲು ಕ್ಷೇತ್ರದ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ ಅವರ ಪೌರೋಹಿತ್ವದ ಪ್ರಾರ್ಥನೆ, ಪುಣ್ಯಾಹ, ತೋರಣ ಮುಹೂರ್ತ, ಚಂಡಿಕಾ ಯಾಗ, ನವಗ್ರಹ ಪೂಜೆ, ಯಾಗದ ಪೂರ್ಣಾಹುತಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದುರ್ಗಾನಮಸ್ಕಾರ ಪೂಜೆ, ದೈವ ಸಾನ್ನಿಧ್ಯ ಗಳಿಗೆ ಸಾನ್ನಿಧ್ಯ ಕಲಶಾ ಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಕ್ತಿಗಾನ ಸುಧೆ, ಮಹಿಳಾ ಯಕ್ಷಗಾನ “ಗುರುದಕ್ಷಿಣೆ’ ನಡೆಯಿತು.

LEAVE A REPLY

Please enter your comment!
Please enter your name here