ಕಟಪಾಡಿ : ಅವಿಭಜಿತ ದ.ಕ ಜಿಲ್ಲಾ ವೇದವಿಧಾತ ಯಾಗಸಮಿತಿಯ ವತಿಯಿಂದ ಕಳತ್ತೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆವರಣದಲ್ಲಿ ಡಿ. 31 ರಿಂದ ಜ. 7ರ ಪರ್ಯಂತ ಲೋಕಕಲ್ಯಾಣಾರ್ಥವಾಗಿ ಜರಗಿದ ಋಕ್ ಸಂಹಿತಾಯಾಗದ ಮಹಾ ಪೂರ್ಣಾಹುತಿ ಯೊಂದಿಗೆ ಸಂಪನ್ನಗೊಂಡಿತು.
ಉಪಸ್ಥಿತರಿದ್ದ ಹಾಸನ ಅರೆಮಾದನ ಹಳ್ಳಿ ಮಹಾಸಂಸ್ಥಾನ ಮಠದ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ಆಶೀರ್ವಚಿಸಿ, ಋಕ್ ಸಂಹಿತಾಯಾಗದ ಯಾಗದ ಸತ್ಸಂಗ ಫಲ ಅಪರಿಮಿತವಾಗಿದೆ. ಈ ವಿಶೇಷವಾದ ಯಾಗದಲ್ಲಿ ಪಾಲ್ಗೊಳ್ಳುವವರೂ ಧನ್ಯರು ಎಂದರು.
ಉದ್ಯಮಿ ಗುರ್ಮೆ ಸುರೇಶ್ಪಿ ಶೆಟ್ಟಿ ಮಾತನಾಡಿದರು. ಬ್ರಹ್ಮಶ್ರೀ ಉದ್ಯಾವರ ವಿಶ್ವನಾಥ ಪುರೋಹಿತ್ ಇವರ ಉಪಸ್ಥಿತಿಯಲ್ಲಿ ಸುರತ್ಕಲ್ ನಾರಾಯಣ ಪುರೋಹಿತ್ ಆಚಾರ್ಯತ್ವದಲ್ಲಿ ಜರಗಿದ ಧಾರ್ಮಿಕ ಅನುಷ್ಠಾನಗಳು ಅವಿಭಜಿತ ದ.ಕ ಜಿಲ್ಲಾ ವೇದವಿಧಾತ ಯಾಗಸಮಿತಿಯ ಸಂಚಾಲಕ ಹಾಗೂ ಯಾಗದ ಪವಿತ್ರಪಾಣಿ ಪಾದೂರು ಪಿ.ಕೆ. ಶ್ರೀಧರ ಪುರೋಹಿತ್ ಪೂರ್ಣಾಹುತಿ ನೆರವೇರಿಸಿದರು.
ಯಾಗ ಕಾರ್ಯದಲ್ಲಿ ತೊಡಗಿಸಿಕೊಂಡ ಪುರೋಹಿತರನ್ನು ಸಮಿತಿಯ ಪ್ರಧಾನ ಸಂಚಾಲಕ, ಪಾದೂರು ಪಿ.ಕೆ. ಶ್ರೀಧರ ಪುರೋಹಿತ್ ದಂಪತಿ ಗೌರವಿಸಿದರು. ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮೊಕ್ತೇಸರ ನವೀನ್ ಆಚಾರ್ಯ ಪಡುಬಿದ್ರಿ, ಮೂರನೇ ಮೊಕ್ತೇಸರ ಕಳತ್ತೂರು ಅನಂತಯ್ಯ ಆಚಾರ್ಯ, ಮಾಜಿ ಮೊಕ್ತೇಸರ ಪಡುಕುತ್ಯಾರು ಸದಾಶಿವ ಎ. ಆಚಾರ್ಯ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಶೇಖರ ಆಚಾರ್ಯ, ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಆಚಾರ್ಯ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ ಕಳತ್ತೂರು, ವೈದಿಕರಾದ ರಾಘವೇಂದ್ರ ಸ್ಥಪತಿ, ದಾನಿಗಳಾದ ರಾಜೀವಿ ಕೃಷ್ಣ ಆಚಾರ್ಯ, ಕಳತ್ತೂರು ವಿಶ್ವಕರ್ಮ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಉಪಸ್ಥಿತರಿದ್ದರು.
ಪ್ರಸಾದ್ ಪುರೋಹಿತ್ ಸಂಕಲಕರಿಯ ಸ್ವಾಗತಿಸಿದರು. ಜಿ.ಎಸ್. ಪುರಂದರ ಪುರೋಹಿತ್ ಮುನಿಯಾಲು ಪ್ರಸ್ತಾವನೆಗೈದರು.