Home ಧಾರ್ಮಿಕ ಸುದ್ದಿ ರೋಜರಿ ಮಾತೆಯ ವಾರ್ಷಿಕ ಹಬ್ಬ

ರೋಜರಿ ಮಾತೆಯ ವಾರ್ಷಿಕ ಹಬ್ಬ

1266
0
SHARE

ಕುಂದಾಪುರ: ಮೇರಿ ರೋಜರಿ ಮಾತೆ ಇವರ ಸಮರ್ಪಣೆ ನಮ್ಮ ಜೀವನದ ಆದರ್ಶ. ನಮ್ಮ ಕುಟುಂಬ ಜೀವನಕ್ಕೆ ಶಕ್ತಿ ದೃಢಿಕರಣ ನೀಡುತ್ತೆ ಎಂದು ಧರ್ಮಗುರು ವಂ| ಸ್ಟ್ಯಾನಿ ಬಿ. ಲೋಬೊ ಸಂದೇಶ ನೀಡಿದರು.

ಅವರು ಬುಧವಾರ ಕುಂದಾಪುರ ರೋಜರಿ ಮಾತಾ ದೇಗುಲದ ವಾರ್ಷಿಕ ಮಹಾ ಹಬ್ಬದ ಪ್ರಯುಕ್ತ ದಿವ್ಯ ಬಲಿ ಪೂಜೆಯ ನೇತೃತ್ವವನ್ನು ವಹಿಸಿ ಅನುಗ್ರಹ ಸಂದೇಶ ನೀಡಿದರು.

ಧರ್ಮಗುರು ವಂ| ಜೆರಾಲ್ಡ್‌ ರೋಯ್‌ ಲೋಬೊ ಗಾಯನ ಮಂಡಳಿಯ ನೇತೃತ್ವ ವಹಿಸಿದ್ದರು. ಧರ್ಮಗುರು ವಂ| ಪ್ರವೀಣ್‌ ಮಾರ್ಟಿಸ್‌, ಕುಂದಾಪುರ ವಲಯದ ಧರ್ಮ ಕೇಂದ್ರಗಳ ಅನೇಕ ಧರ್ಮ ಗುರುಗಳು, ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ವಾಡೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಭಕ್ತರು
ಉಪಸ್ಥಿತರಿದ್ದರು. ಕುಂದಾಪುರ ಚರ್ಚಿನ ಧರ್ಮಗುರು ವಂ| ಸ್ತ್ಯಾನಿ ತಾವ್ರೊ ವಂದಿಸಿದರು.

LEAVE A REPLY

Please enter your comment!
Please enter your name here