ಹಿರಿಯಡಕ : 1300 ವರ್ಷಗಳ ಇತಿಹಾಸ ಹೊಂದಿದ ಉಡುಪಿಯಿಂದ 20ಕಿ.ಮೀ.ದೂರದಲ್ಲಿರುವ ಬೆಳ್ಳರ್ಪಾಡಿ ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರದ ಕಾಮಗಾರಿ ಭರದಿಂದ ಸಾಗುತ್ತಿದೆ.
ಸುಮಾರು 60 ವರ್ಷಗಳ ಹಿಂದೆ ದಿ.ಪಿ ಜರ್ನಾದನ ನೆಲ್ಲಿಯವರ ಸಹಕಾರದಿಂದ ಇಲ್ಲಿ ವಿಶಾಲವಾದ ಸರೋವರವನ್ನು ನಿರ್ಮಿಸಲಾಗಿತ್ತು .ತನ್ನ ಪ್ರಾಚೀನ ಪುರಾಣ ಐತಿಹ್ಯದೊಂದಿಗೆ ಭವ್ಯ ಧಾರ್ಮಿಕ ಸಂಸ್ಕೃತಿಯನ್ನು ಸಾರುವ ಈ ದೇವಾಲಯದಲ್ಲಿ ಇತ್ತೀಚೆಗೆ ದೈವಜ್ಞ ಜೋತಿಷ್ಯ ವಿದ್ವಾಂಸರಾದ ನಿಟ್ಟೆ ಪ್ರಸನ್ನ ಆಚಾರ್ಯ ಇವರ ನೇತೃತ್ವ ಹಾಗೂ ಕುಮಾರಗುರು ತಂತ್ರಿ ಇವರ ಉಪಸ್ಥಿತಿಯಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೆಲವೊಂದು ವಾಸ್ತುಸಹಿತ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.ಮುಖ್ಯವಾಗಿ ನೂತನ ಶಿಲಾಮಯ ಗರ್ಭಗುಡಿಯೊಂದಿಗೆ ತಾಮ್ರದ ಮೇಲ್ಛಾವಣಿ ,ನವೀಕೃತ ತೀರ್ಥ ಮಂಟಪ ,ನೂತನ ಧ್ವಜಸ್ತಂಭ ಸುತ್ತು ಪೌಳಿ ಸಹಿತ ದೇವರ ಬಿಂಬದ ಪುನ: ಪ್ರತಿಷ್ಟೆ -ಅಷ್ಟಬಂಧ ಬ್ರಹ್ಮಾಕಲಶಾಭಿಷೇಕ ನಡೆಸುವ ಬಗ್ಗೆ ಸಂಕಲ್ಪಿಸಲಾಗಿದೆ.ಸುಮಾರು 2 ಕೋಟಿ ರೂಪಾಯಿಗಳ ವೆಚ್ಚ ತಗಲಲಿದ್ದು ಈ ಮಹತ್ಕಾರ್ಯಗಳಿಗೆ ಊರಿನ ಪರವೂರಿನ ಧನ ಸಹಾಯಮಾಡುವ ಭಕ್ತರು ಪೆರ್ಡೂರು ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101249966490 ಮೂಲಕ ಪಾವತಿಸುವಂತೆ ದೇವಸ್ಥಾನದ ವ್ಯವಸ್ಥಪನಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಭಟ್,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ .ಶಿವರಾಮ್ ಶೆಟ್ಟಿ ವಿನಂತಿಸಿದ್ದಾರೆ.