Home ಧಾರ್ಮಿಕ ಸುದ್ದಿ ಜೀರ್ಣೋದ್ಧಾರ, ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಸಂಪನ್ನ

ಜೀರ್ಣೋದ್ಧಾರ, ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಸಂಪನ್ನ

1462
0
SHARE

ಸಿದ್ದಾಪುರ: ಶಂಕರ ನಾರಾಯಣ ಶ್ರೀ ವೀರಕಲ್ಲುಕುಟಿಗ ದೈವಸ್ಥಾನದಲ್ಲಿ ಫೆ.18 ರಂದು ಮೊದಲ್ಗೊಂಡು 19ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜೀರ್ಣೋದ್ಧಾರ, ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಫೆ. 18ರ ಸಂಜೆ ಶ್ರೀ ಗಣಪತಿ ಪೂಜೆ, ಪುಣ್ಯಾಹ, ರಾಕ್ಷೋಘ್ನ ಹೋಮ, ವಾಸ್ತುಪೂಜಾ ಬಲಿ, ವಾಸ್ತು ಹೋಮ, ರಕ್ಷಾ ಸುದರ್ಶನ ಯಾಗ, ಅಧಿವಾಸ ಪೂಜೆ, ಅಧಿವಾಸ ಹೋಮ, ಪ್ರತಿಷ್ಠಾಪನೆ, ಜೀವಕುಂಭ ಸೇಚನ, ಅಷ್ಟೋತ್ತರ ಸಹಸ್ರ ಕುಂಭಸ್ಥಾಪನೆ, ಕಲಾತತ್ತ್ವ ಪ್ರಧಾನ ಹೋಮ, ಪ್ರಸನ್ನ ಪೂಜೆಗಳು ಜರಗಿದರೆ, ಫೆ. 19ರಂದು ಬೆಳಗ್ಗೆ ಶ್ರೀ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಕಲಾತತ್ತ್ವ, ಶಕ್ತಿ ಹೋಮ, ಅಷ್ಟೋತ್ತರ ಸಹಸ್ರ ಪರಿಕರ ಕುಂಭ ಸಹಿತ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಂದರ್ಶನ, ತೀರ್ಥ ಪ್ರಸಾದ, ಅನ್ನದಾನ ಸೇವೆಗಳು ಜರಗಿದವು.

LEAVE A REPLY

Please enter your comment!
Please enter your name here