Home ಧಾರ್ಮಿಕ ಸುದ್ದಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಚಾಲನೆ

1459
0
SHARE

ಮಹಾನಗರ: ಕುಲಶೇಖರ ಸಮೀಪದ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್‌ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸೋಮವಾರ ಅಧಿಕೃತ ಚಾಲನೆ ದೊರೆತಿದೆ.

ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಪರಿಗ್ರಹ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಋತ್ವಿಗ್ವರಣ, ಪಂಚಗವ್ಯ ಹೋಮ, ಕಂಕಣ ಬಂಧನ, ಭದ್ರ ದೀಪ ಸ್ಥಾಪನೆ, ಅಥರ್ವಶೀರ್ಷ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ ಗೋಪೂಜೆ, ಪ್ರಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಹಾಗೂ ದಿಗ್ಬಲಿ ಕಾರ್ಯಕ್ರಮ ನಡೆಯಿತು.

ಜ. 16ರಂದು ಸಂಜೆ ಕೊಲ್ಹಾಪುರದ ಕರವೀರ ಮಠದ ಶ್ರೀ ವಿದ್ಯಾನರಸಿಂಹ ಭಾರತೀ ಮಹಾ ಸ್ವಾಮೀಜಿ ಅವರನ್ನು ಪೂರ್ಣಕುಂಭದೊಂದಿಗೆ ಕ್ಷೇತ್ರಕ್ಕೆ ಸ್ವಾಗತಿ ಸಲಾಗುವುದು.
ಜ. 17ರಂದು ಸಂಜೆ 5ಕ್ಕೆ ಶ್ರೀ ವಿದ್ಯಾನರಸಿಂಹ ಭಾರತೀ ಮಹಾ ಸ್ವಾಮೀಜಿ ಅವರಿಗೆ ಪಾದುಕಾ ಪೂಜೆ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ.

ಬಿಂಬ ಪ್ರತಿಷ್ಠೆ
ಜ. 18ರಂದು ಬೆಳಗ್ಗೆ 8.40ಕ್ಕೆ ನೂತನ ಆಲಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಬ್ರಹ್ಮಕಲಶಾಭಿಷೇಕ, ನಡಾವಳಿ ಮಹಾಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here