Home ಧಾರ್ಮಿಕ ಸುದ್ದಿ ರೇಣುಕಾಚಾರ್ಯರ ರಥೋತ್ಸವ

ರೇಣುಕಾಚಾರ್ಯರ ರಥೋತ್ಸವ

1705
0
SHARE

ಹುಬ್ಬಳ್ಳಿ: ಅರಿವು ಮತ್ತು ಆಚಾರಗಳ ಮೂಲಕ ಮಾನವನ ಬದುಕು ಶ್ರೀಮಂತಗೊಳ್ಳಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ|ಪ್ರಸನ್ನ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸುಖ ಸಮೃದ್ಧಿ ಬದುಕಿಗೆ ಧರ್ಮ ಪರಿಪಾಲನೆ ಮುಖ್ಯ. ವೀರಶೈವ ಧರ್ಮದಲ್ಲಿ ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆಗೆ ವಿಶೇಷ ಮಹತ್ವ ಕೊಡಲಾಗಿದೆ. ಕಾಯಕ-ದಾಸೋಹ ಮೂಲಕ ಬದುಕಿನಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ್ದಾರೆ.

ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವ ಸಾರಿದ ಸಂದೇಶ ಸರ್ವರಿಗೂ ದಾರಿದೀಪವಾಗಿದೆ. ಹಳ್ಯಾಳ ಗ್ರಾಮದ ಸದ್ಭಕ್ತರು ಸೇರಿ ಶ್ರೀ ಜಗದ್ಗುರು ರೇಣುಕಾಚಾರ್ಯರ ನೂತನ ರಥ ನಿರ್ಮಿಸಿ ಜಾತ್ರೆ ನೆರವೇರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವ ಜೀವನದಲ್ಲಿ ಗುರಿ ಇರಬೇಕು. ಅದನ್ನು ತಲುಪಲು ಶ್ರೀಗುರುವಿನ ಅವಶ್ಯಕತೆಯಿದೆ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕ ಗದಿಗೆಯ್ಯ ಹಿರೇಮಠರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ನಡೆಯಿತು. ಬಿ.ಡಿ. ನಾಗನಗೌಡರ
ಸ್ವಾಗತಿಸಿದರು. ಗುರುನಾಥಗೌಡ ಮಾದಾಪುರ ನಿರೂಪಿಸಿದರು.

ರಥೋತ್ಸವ: ಬೆಳಗ್ಗೆ ಲಿಂಗೋದ್ಭವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ನಡೆಯಿತು. ಸಂಜೆ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವವು ಸಡಗರ-ಸಂಭ್ರಮದಿಂದ ನಡೆಯಿತು.

LEAVE A REPLY

Please enter your comment!
Please enter your name here