ನರಿಂಗಾನ: ವರ್ಕಾಡಿ-ನರಿಂಗಾನ ಗ್ರಾಮದ ಕಾರಣಿಕ ಕ್ಷೇತ್ರ ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತಿ ವರ್ಕಾಡಿ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ಸೋಮವಾರ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ದೈವಸ್ಥಾನ, ದೇವಸ್ಥಾನ, ಧಾರ್ಮಿಕ ಮಂದಿರ, ಕ್ಷೇತ್ರ ನಿರ್ಮಾಣವಾಗಬೇಕಾದರೆ ಅದಕ್ಕಾಗಿ ಭಗ ವದ್ಭಕ್ತರು ಪ್ರಾಮಾಣಿಕವಾಗಿ ಶ್ರದ್ಧಾ ಭಕ್ತಿ ಯಿಂದ ಕರ್ತವ್ಯ ಕಾರ್ಯನಿರ್ವಹಿಸಿರೆ ಕ್ಷಿಪ್ರಗತಿಯಲ್ಲಿ ನೆರವೇರಲು ಸಾಧ್ಯ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಮಾತನಾಡಿ, ಶ್ರೀಕ್ಷೇತ್ರದಲ್ಲಿ ಯುವಕರು ಹಾಗೂ ಮಾತೆಯರ ತಂಡ ಸ್ವಯಂ ಸೇವಕರಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ, ಕ್ಷೇತ್ರಕ್ಕೆ ಬೇಕಾದ ಪರಿಕರಗಳ ಸಂಗ್ರಹಕ್ಕೆ ಬಹಳಷ್ಟು ಕೊಡುಗೆ ನೀಡುವ ಮೂಲಕ ಕ್ಷೇತ್ರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದರು.
ಮೊಕ್ತೇಸರ ಬಿ. ನಾರಾಯಣ ಶೆಟ್ಟಿ ಬಲೆತ್ತೋಡು ಮಾತನಾಡಿದರು. ತಂತ್ರಿ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ವೈದಿಕ ವಿಧಿಗಳು ಜರಗಿದವು. ಕಣಂತೂರಿನ ಆಡಳಿತ ಮೊಕ್ತೇಸರ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಡಾ| ಎಸ್.ಎಸ್. ರಾಮ್, ಕಿನ್ಯ ಬೆಳರಿಂಗೆ ಭಂಡಾರಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯ, ಪ್ರಸನ್ನ ಪಕ್ಕಳ ಬಲೆತ್ತೋಡು, ಜಯರಾಮ ರೈ ಮೂಡೂರು, ಚಂದ್ರಹಾಸ ಶೆಟ್ಟಿ ಮೋರ್ಲ, ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ, ವಸಂತ ಕುಮಾರ್ ಬೆರ್ಮದೆ, ಸಂಚಾಲಕ ಹರೀಶ್ ಕನ್ನಿಗುಳಿ, ಎಡಂಬಲೆ ಗೋಪಾಲ ಭಟ್, ಮೂಡೂರು ಜಯರಾಮ ಶೆಟ್ಟಿ, ಸದಾಶಿವ ಶೆಟ್ಟಿ ಭಂಡಾರಮನೆ, ರಾಜೀವ ಎಸ್. ಶಾಂತಿಪಳಿಕೆ ಉಪಸ್ಥಿತರಿದ್ದರು. ಸತೀಶ್ ಕುಮಾರ್ ಪುಂಡಿಕಾ ನಿರೂಪಿಸಿದರು.