Home ಧಾರ್ಮಿಕ ಸುದ್ದಿ ನವೀಕೃತ ಬಲ್ಯ ಪಟ್ನೂರು ರಾಜನ್‌ ದೈವ, ಪರಿವಾರ ದೈವಗಳ ದೈವಸ್ಥಾನದಲ್ಲಿ ನೇ

ನವೀಕೃತ ಬಲ್ಯ ಪಟ್ನೂರು ರಾಜನ್‌ ದೈವ, ಪರಿವಾರ ದೈವಗಳ ದೈವಸ್ಥಾನದಲ್ಲಿ ನೇ

454
0
SHARE

ಕಡಬ : ನವೀಕರಣಗೊಂಡಿರುವ ಬಲ್ಯ ಪಟ್ನೂರು ಗ್ರಾಮದ ಕೂಡುಕಟ್ಟಿನ ಶ್ರೀ ರಾಜನ್‌ ದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್‌ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆದು ದೈವಗಳ ನೇಮವು ಬುಧವಾರ ರಾತ್ರಿ ಜರಗಿತು.

ಸಂಜೆ ಗೊನೆ ಮುಹೂರ್ತ ನಡೆದು ಶ್ರೀ ರಾಜನ್‌ ದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಿತು. ರಾತ್ರಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಹಾಗೂ ಶ್ರೀ ರಾಜನ್‌ ದೈವದ ನೇಮ ನಡೆಯಿತು. ಕುಂತೂರಿನ ಚೆನ್ನ ಅಜಲ ಅವರ ನೇತೃತ್ವದಲ್ಲಿ ಜರಗಿದ ದೈವ ನರ್ತನ ದಲ್ಲಿ ರಾಮಣ್ಣ ಗೌಡ ಅವರು ಪ್ರಧಾನ ಪರಿಚಾರಕರಾಗಿ ಕಾರ್ಯನಿರ್ವಹಿಸಿದರು. ದೇವಣ್ಣ ಗೌಡ ಕೊಲ್ಲಿಮಾರು, ಸುಂದರ ಮಡಿವಾಳ ಇಚ್ಲಂಪಾಡಿ, ರಾಜೇಶ್‌ ಮಡಿವಾಳ, ಗುಡ್ಡಪ್ಪ ಪೂಜಾರಿ ಕೇರ್ಪುಡೆ, ಪೆರ್ಣ ಮುಗೇರ ಅವರು ಪರಿಚಾರಕರಾಗಿ ಸಹಕರಿಸಿದರು.

ಶ್ರೀ ರಾಜನ್‌ ದೈವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಗೌಡ ಪನ್ಯಾಡಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು, ಚಕ್ರೇಶ್ವರ ಆರಿಗ ಮೂಡುಬಿದ್ರೆ, ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಚಿತ್ತರಂಜನ್‌ ರೈ ಮಾಣಿಗ, ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಆರಿಗ ಪಟ್ನೂರು, ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಡಿ.ಬಿ.ಮೋಹನ ಗೌಡ ದೇರಾಜೆ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಶೇಖರ ಗೌಡ ದೇರಾಜೆ, ಸೇವಾ ಸಮಿತಿಯ ಕಾರ್ಯದರ್ಶಿ ಪೂರ್ಣೇಶ್‌ ಗೌಡ ಬಾಬುಬೆಟ್ಟು, ಪ್ರತಿಷ್ಠಾಪನಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಗೌಡ ಸನಿಲ, ಸೇವಾ ಸಮಿತಿ ಕೋಶಾಧಿಕಾರಿ ದೇವದಾಸ್‌ ಭಟ್‌ ಪಟ್ನೂರು, ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಕೃಷ್ಣಪ್ಪ ದೇವಾಡಿಗ ಸನಿಲ, ಜೀರ್ಣೋದ್ದಾರ ಸಮಿತಿಯ ಜತೆ ಕಾರ್ಯ ದರ್ಶಿ ಬಾಲಕೃಷ್ಣ ಪನ್ಯಾಡಿ, ಕಾರ್ಯಾಲಯ ಸಮಿತಿ ಸಂಚಾಲಕ ಅಚ್ಯುತ ಗೌಡ ಪಟ್ನೂರು, ಚಪ್ಪರ ನಿರ್ಮಾಣ ಸಮಿತಿ ಸಂಚಾಲಕ ದೇವಯ್ಯ ಗೌಡ ಪನ್ಯಾಡಿ, ಪ್ರತಿಷ್ಠಾಪನ ಸಮಿತಿ ಉಪಾಧ್ಯಕ್ಷ ಶಶಿಧರ ಗೌಡ ಪನ್ಯಾಡಿ, ಸೇವಾ ಸಮಿತಿ ಜತೆ ಕಾರ್ಯದರ್ಶಿ ಶೇಖರ ಗೌಡ ಪಟ್ನೂರು, ರಾಜಾರಾಮ್‌ ಭಟ್‌ ಹೊಸಮಠ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here