Home ಧಾರ್ಮಿಕ ಸುದ್ದಿ ‘ಕ್ಷೇತ್ರಗಳ ಜೀರ್ಣೋದ್ಧಾರ ಪುಣ್ಯದ ಕೆಲಸ’

‘ಕ್ಷೇತ್ರಗಳ ಜೀರ್ಣೋದ್ಧಾರ ಪುಣ್ಯದ ಕೆಲಸ’

1671
0
SHARE

ಮಹಾನಗರ: ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಪುಣ್ಯದ ಕೆಲಸ ಎಂದು ಮಹಾ ರಾಷ್ಟ್ರ ಕೊಲ್ಹಾಪುರದ ಕರವೀರ ಪೀಠದ ಶ್ರೀ ವಿದ್ಯಾನರಸಿಂಹ ಭಾರತೀ ಮಹಾ ಸ್ವಾಮೀಜಿ ಹೇಳಿದರು.

ಕುಲಶೇಖರ ಸಮೀಪದ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್‌ ಪ್ರತಿಷ್ಠಾ ಮಹೋ ತ್ಸವ ಹಾಗೂ ಬ್ರಹ್ಮಕಲಶೋತ್ಸದ ಪ್ರಯುಕ್ತ ಗುರುವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸನಾತನ ವೈದಿಕ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ಆದರೆ ಇಂದು ಇದರ ಪರಿಪಾಲನೆ ಕಡಿಮೆಯಾಗುತ್ತಿರುವ ಕಾರಣ ಆಚಾರ-ವಿಚಾರ, ಬದುಕಿನ ಬಗ್ಗೆ ನಾವೆಲ್ಲರೂ ಅವಲೋಕನ ಮಾಡುವ ಆವಶ್ಯಕತೆ ಇದೆ. ಧರ್ಮಕ್ಷೇತ್ರಗಳು, ಮಠ-ಮಂದಿರಗಳು ಮನಸ್ಸಿನ ಸ್ವಚ್ಛತೆ ಯನ್ನು ಮಾಡಬೇಕಾಗಿದೆ ಎಂದರು.

ಕ್ಷೇತ್ರಗಳು ಅಭಿವೃದ್ಧಿಯಾಗಬೇಕು.

ದೇವಸ್ಥಾನ, ದೈವಸ್ಥಾನ, ಭಜನ ಮಂದಿರಗಳು ಬದುಕಿನ ಶಕ್ತಿ ಕೇಂದ್ರ ಗಳಾಗಿವೆ.ಜೀರ್ಣಾವಸ್ಥೆಯ ಲ್ಲಿರುವ ಪುರಾತನ ಕ್ಷೇತ್ರಗಳು, ಮಂದಿರಗಳು ಅಭಿವೃದ್ಧಿಯಾಗಬೇಕು. ಕ್ಷೇತ್ರಗಳು ಜೀಣೊರ್ದ್ಧಾರಗೊಂಡಲ್ಲಿ ಆ ಊರು ಅಭಿವೃದ್ಧಿಯಾದಂತೆ ಎಂದರು.

ತಿರುಪತಿ ಸೆಂಟ್ರಲ್‌ ವಿಶ್ವವಿದ್ಯಾಲಯದ ಪ್ರೊ| ಗಣಪತಿ ಭಟ್ ಅವರು ಕರವೀರ ಪೀಠದ ಗುರು ಪರಂಪರೆ ಬಗ್ಗೆ ಮಾಹಿತಿ ನೀಡಿದರು.

ಕೆಎನ್‌ಬಿಎಂ ಟ್ರಸ್ಟ್‌ನ ಟ್ರಸ್ಟಿ ಡಾ| ಕೆ. ರಾಮಕೃಷ್ಣ ಭಟ್ ಸ್ವಾಗತಿಸಿ, ಕಾರ್ಯನಿರ್ವಾಹಕ ಟ್ರಸ್ಟಿ ಕೆ. ಸುಬ್ರಹ್ಮಣ್ಯ ಭಟ್ ನಿರ್ವಹಿಸಿದರು.

••ಸಂಸ್ಕೃತಿ ಶ್ರೇಷ್ಠವಾದುದು

•ಮನಸ್ಸಿನ ಸ್ವಚ್ಛತೆ ಅಗತ್ಯ

•ದೇವಸ್ಥಾನ ಶಕ್ತಿಯ ಕೇಂದ್ರ

LEAVE A REPLY

Please enter your comment!
Please enter your name here