Home ಧಾರ್ಮಿಕ ಸುದ್ದಿ ಉಡುಪಿ ನೆಲ್ಲಿಕಟ್ಟೆ ಶ್ರೀ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ : ವಾರ್ಷಿಕ ನೇಮ

ಉಡುಪಿ ನೆಲ್ಲಿಕಟ್ಟೆ ಶ್ರೀ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ : ವಾರ್ಷಿಕ ನೇಮ

441
0
SHARE

ಉಡುಪಿ: ಉಡುಪಿ ನೆಲ್ಲಿಕಟ್ಟೆ ಶ್ರೀ ಕಂಬಿಗಾರ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ನೇಮವು ಫೆ.24 ಮತ್ತು ಫೆ.25ರಂದು ಜರಗಲಿದೆ.

ಈ ಪ್ರಯುಕ್ತ ಫೆ. 24ರಂದು ಬೆಳಗ್ಗೆ ದೈವಸ್ಥಾನದಲ್ಲಿ ಕೊಡವೂರು ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶುದ್ಧಕಲಶಾಭಿಷೇಕ, ಕಂಬಿಗಾರ ದೈವದ ದರ್ಶನ ಸೇವೆಯಾಗಿ ಶಿರಿಬೀಡು ಗದ್ದೆಯಲ್ಲಿ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ.

ಸಾಯಂಕಾಲ ಶ್ರೀ ಕ್ಷೇತ್ರದಿಂದ ಭಂಡಾರ ಹೊರಟು, ಚಪ್ಪರ ಪ್ರವೇಶವಾಗಿ ರಾತ್ರಿ ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ದೇವಿ ತನ್ನಿಮಾನಿಗ ನೇಮವು ಜರಗಲಿದೆ. ಫೆ. 25ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತಿ ಬಂಟ ದೈವದ ನೇಮ, ಮಧ್ಯಾಹ್ನ 2ಕ್ಕೆ ಶ್ರೀ ಕೊರಗಜ್ಜ ದೈವದ ನೇಮವು ಜರಗಲಿದೆ ಎಂದು ದೈವಸ್ಥಾನ ಸಮಿತಿಯ ಅಧ್ಯಕ್ಷ ಶೇಖರ್‌ ಜಿ. ಅಮೀನ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here