ಸವಣೂರು: ಧಾರ್ಮಿಕ ಪ್ರಜ್ಞೆ ಹಾಗೂ ಆಚಾರಗಳ ಪಾಲನೆಯಿಂದ ಬದುಕಿನ ದಾರಿ ಕಾಣಲು ಸಾಧ್ಯ. ಧಾರ್ಮಿ ಕತೆಯ ಹಿಂದೆ ನಂಬಿಕೆ ಮುಖ್ಯ. ಸ್ವಾರ್ಥ ಸಾಧನೆಗಾಗಿ ಮತ್ತೂಬ್ಬರ ಬದು ಕನ್ನು ಹಾಳಮಾಡುವುದು ಸರಿಯಲ್ಲ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ರವಿವಾರ ರಾತ್ರಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀ ಕರಣ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲ ಶೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದೇವರ ಧ್ಯಾನದಿಂದ ಬದುಕು ಸಂಪನ್ನವಾಗುವುದು. ಧರ್ಮ ಜಾಗೃತಿ ಹಾಗೂ ಸಂಸ್ಕೃತಿಯ ಉಪಾಸನೆ ಎಲ್ಲ ಮನೆಗಳಲ್ಲೂ ಆಗಬೇಕು. ಒಳಿತು – ಕೆಡುಕುಗಳ ಅರಿವು ಅತ್ಯಗತ್ಯ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಶಿಲ್ಪಶಾಸ್ತ್ರಜ್ಞ ಎಂ.ಎಸ್. ಪ್ರಸಾದ್ ಮುನಿಯಂಗಳ, ಪ್ರತಿಯೊಂದು ಜೀವರಾಶಿಯಲ್ಲೂ ದೇವರಿದ್ದಾನೆ. ಆದರೆ ವಿಚಾರವಾದಿಗಳು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಪ್ರತಿನಿತ್ಯವೂ ಜೋತಿಷ ಪ್ರಕಾರದಂತೆಯೇ ನಡೆಯುತ್ತದೆ. ವಾರದ ಏಳು ದಿನಗಳ ಹೆಸರಿನಲ್ಲೂ ನವಗ್ರಹಗಳ ಸೂಚಕಗಳಿವೆ. ಇಂತಹ ಅನೇಕ ವಿಚಾರಗಳು ವಿಶ್ವದಲ್ಲಿವೆ. ಇದನ್ನು ವಿಶ್ವವೇ ಒಪ್ಪಿಕೊಂಡಿದೆ. ವಿಕಾಸವಾದ ಎಂಬುದು ಸುಳ್ಳು. ಆದರೆ, ನಾವು ಅದನ್ನೇ ನಂಬಿದ್ದೇವೆ. ನಮ್ಮ ಆಚಾರ ವಿಚಾರಗಳನ್ನು ವಿದೇಶಿಯರು ಅಧ್ಯಯನ ಮಾಡುತ್ತಿದ್ದಾರೆ. ನಾವು ಮಾತ್ರ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ವಾಲುತ್ತಿದ್ದೇವೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪುಣ್ಯದಾಯಕ. ಇದರಿಂದ ಊರಲ್ಲಿ ಸುಭಿಕ್ಷೆ ನೆಲೆಗೊಳ್ಳಲು ಸಾಧ್ಯ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ಮಾತನಾಡಿ, ವಿಷ್ಣುಮೂರ್ತಿ ದೇವಸ್ಥಾನವನ್ನು 1 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿದ ಸವಣೂರುಗುತ್ತು ಕುಟುಂಬದವರನ್ನು ಅಭಿನಂದಿಸಿದರು. ಶಾಸಕ ಎಸ್. ಅಂಗಾರ ಮಾತನಾಡಿ, ಮನಃಪೂರ್ವಕ ಭಕ್ತಿಯಿಂದ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ. ನಿಷ್ಕಲ್ಮಶ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿ ಎಂದರು.
ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ದೇವಾಲಯದ ಆಡಳಿತ ಮೊಕ್ತೇಸರ ಸವಣೂರುಗುತ್ತು ಡಾ| ರತ್ನಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ರೈ ನೋಲ್ಮೆ, ಉಪಾಧ್ಯಕ್ಷ ಸವಣೂರು ಸುಂದರ ರೈ, ಕೋಶಾಧಿಕಾರಿಗಳಾದ ಬೆಳ್ಳಿಯಪ್ಪ ಗೌಡ ಚೌಕಿಮಠ, ರಾಘುವ ಗೌಡ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ ವಂದಿಸಿದರು. ಬ್ರಹ್ಮಕಲಶೋತ್ಸವದ ವೇದಿಕೆ ಸಮಿತಿ ಸಂಚಾಲಕ ರಾಕೇಶ್ ರೈ ಕೆಡೆಂಜಿ ಹಾಗೂ ಶ್ರೀಧರ್ ಸುಣ್ಣಾಜೆ ಕಾರ್ಯಕ್ರಮ ನಿರೂಪಿಸಿದರು
ಗೌರವಾರ್ಪಣೆ
ದೇವಸ್ಥಾನದ ನಿರ್ಮಾಣಕ್ಕೆ ಮರದ ವ್ಯವಸ್ಥೆಯನ್ನು ಮಾಡಿದ ವಿಶ್ವನಾಥ ರೈ ಮುಂಡತ್ತಾಜೆ, ದೇವಾಲಯದ ವಾಸ್ತು ಶಿಲ್ಪಿ ಎಂ.ಎಸ್. ಪ್ರಸಾದ್ ಮುನಿಯಂಗಳ ಅವರನ್ನು ದೇವಾಲಯದ ವತಿಯಿಂದ ಸಮ್ಮಾನಿಸಲಾಯಿತು.