Home ಧಾರ್ಮಿಕ ಸುದ್ದಿ ನಮ್ಮ ಸಂಸ್ಕೃತಿ ಏಳಿಗೆಗೆ ಕಟಿಬದ್ಧರಾಗಿ: ವಿಜಯೇಂದ್ರ

ನಮ್ಮ ಸಂಸ್ಕೃತಿ ಏಳಿಗೆಗೆ ಕಟಿಬದ್ಧರಾಗಿ: ವಿಜಯೇಂದ್ರ

ಹೆಬ್ರಿ: ವಿಪ್ರ ಬಾಲಕ ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ

1420
0
SHARE

ಹೆಬ್ರಿ : ಭಗವಂತನ ನಾಮ ಸ್ಮರಣೆ ನಮ್ಮ ನಿತ್ಯದ ಕಾಯಕವಾಗಬೇಕು. ವಿಪ್ರ ಬಾಲಕ, ಬಾಲಕಿಯ ಧಾರ್ಮಿಕ ಶಿಬಿರದ ಅವಧಿಯಲ್ಲಿ ಕಲಿಸಿದ ಸೂಕ್ತ, ಸ್ತೋತ್ರ, ಶೋಭಾನೆ, ಜಪ, ಪೂಜೆ, ಪುರಾಣ ಕಥೆಗಳನ್ನು ಮನಸ ಮಾಡಿಕೊಂಡು ನಿತ್ಯಾನುಷ್ಠಾನ ಮಾಡುವುದರೊಂದಿಗೆ ಸಾತ್ವಿಕ ಬದುಕಿನ ಮಹತ್ವವನ್ನು ಎತ್ತಿ ಹಿಡಿಯಬೇಕು. ನಮ್ಮ ಸಂಸ್ಕೃತಿಯ ಏಳಿಗೆಗೆ ನಾವು ಕಟಿಬದ್ದರಾಗಬೇಕು ಎಂದು ಮೈಸೂರಿನ ವಿದ್ವಾಂಸ ಬೆ. ನಾ. ವಿಜಯೇಂದ್ರ ಆಚಾರ್ಯ ಹೇಳಿದರು.

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಹೆಬ್ರಿರಾಘವೇಂದ್ರ ಮಠದ ಸಂಯುಕ್ತ ಆಶ್ರಯದಲ್ಲಿ ಹೆಬ್ರಿಯಲ್ಲಿ 10 ದಿನಗಳ ಕಾಲ ನಡೆದ ವಿಪ್ರ ಬಾಲಕ, ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಶಿಬಿರದ ಪ್ರಾಧ್ಯಾಪಕರಾಗಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಕೇಂದ್ರದ ಹೃಷಿಕೇಶ ಆಚಾರ್ಯ ಮತ್ತು ದಾಮೋದರ ಆಚಾರ್ಯ ಸಹಕರಿಸಿದರು. ಹೆಬ್ರಿ ರಾಘವೇಂದ್ರ ಮಠದ ಧರ್ಮದರ್ಶಿ ವೇ| ಮೂ| ಗೋಪಾಲ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ವಿದ್ವಾನ್‌ ಮಡಾಮಕ್ಕಿ ಅನಂತ ತಂತ್ರಿ, ಅನಂತ ಪದ್ಮನಾಭ ದೇವಸ್ಥಾನದ ಅರ್ಚಕ ವಿದ್ವಾನ್‌ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಜ್ಯೋತಿ ವಿಷ್ಣುಮೂರ್ತಿ ಆಚಾರ್ಯ, ವಿದ್ವಾನ್‌ ಮಡಾಮಕ್ಕಿ ವೇದವ್ಯಾಸ ತಂತ್ರಿ,
ವೆಂಕಟೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸ ಲಾಯಿತು. ಇದೇ ಸಂದರ್ಭದಲ್ಲಿ ಎ. 20ರಂದು ನಿಧನ ಹೊಂದಿದ ಸಮಿತಿ ಸದಸ್ಯ ಹೆಬ್ರಿ ದೇವಸ್ಥಾನದಅರ್ಚಕ ಶ್ರೀಶ ಜೋಯಿಸ್‌ ಅವರಿಗೆ ಸಂತಾಪ ಸೂಚಿಸಲಾಯಿತು.

ಸಮಿತಿ ಸದಸ್ಯ ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್‌ ನಿರೂಪಿಸಿ , ಕಬ್ಬಿನಾಲೆ ರಾಮಚಂದ್ರ ಭಟ್‌ ವಂದಿಸಿದರು.

LEAVE A REPLY

Please enter your comment!
Please enter your name here