ಮಾಣಿಲ ಫೆ. 21: ಸುಜ್ಞಾನದ ಬೆಳಕು ಇರಬೇಕು. ಭಗವಂತನ ಮುಂದೆ ಸಣ್ಣವರಾಗಬೇಕು. ಗುರುವಿನ ಜತೆಗಿದ್ದು ನಮ್ಮ ಹೃದಯವನ್ನು ಶುದ್ಧಿ ಗೊಳಿಸಬೇಕು. ಬದುಕಿನ ದಿಕ್ಕು ಉತ್ತಮವಾಗಿರಬೇಕಾದರೆ ಗುರು ಕೃಪೆ ಬೇಕು. ಸಮಾಜಕ್ಕೆ ದಿಕ್ಕು ತೋರಲು ಧಾರ್ಮಿಕ ಕೇಂದ್ರಗಳಿಂದ ಸಾಧ್ಯ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಶ್ರೀಧಾಮ ಮಾಣಿಲ ಶ್ರೀ ಮಹಾ ಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮದ 3ನೇ ದಿನ ಮಂಗಳವಾರ ಶ್ರೀಧಾಮದ ಶ್ರೀ ನಿತ್ಯಾನಂದ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಕುಡ್ಲ ಟಿವಿಯ ಆಡಳಿತ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ, ಅಳಿಕೆ ನೆಕ್ಕಿತಪುಣಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ಸೀತಾರಾಮ ಪೂಜಾರಿ, ವೈಶ್ಯಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ ಶೇಟ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್, ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಮನೋಜ್ ನಾಯಕ್, ಮುಂಬೈ ಉದ್ಯಮಿ ರಾಜೇಶ್ ಪಾಟೀಲ್, ಚೆಲ್ಲಡ್ಕ ಚಂದ್ರಹಾಸ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಬಿ. ಜಗನ್ನಾಥ ಚೌಟ, ಮುಂಬೈ ಮಲಾಡ್ ಶನಿಮಂದಿರದ ಕೋಶಾಧಿಕಾರಿ ಮೋಹನ ಬಂಗೇರ, ನಾಗಮಂಡಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕೋಶಾಧಿಕಾರಿ ರಘು ಮೂಲ್ಯ ಮತ್ತಿತರರಿದ್ದರು.
ಭಜನೋತ್ಸವ ಸಂಚಾಲಕ ರಾಮಕೃಷ್ಣ ಕಾಟುಕುಕ್ಕೆ ಸ್ವಾಗತಿಸಿದರು. ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವಿಸಿದರು. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಮೇಲ್ವಿಚಾರಕ ಸಂದೇಶ್ ವಂದಿಸಿದರು. ಗೀತಾ ಪುರುಷೋತ್ತಮ ಹಾಗೂ ಮೀನಾಕ್ಷಿ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ
ಕಾರ್ಯಕ್ರಮ ನಿರೂಪಿಸಿದರು.
ಗುರು ಸೇವೆಗೆ ದೇವರ ಅನುಗ್ರಹ
ಗುರುವಿನ ದೊಡ್ಡ ಕಾರ್ಯದಲ್ಲಿ ನಮ್ಮ ಅಳಿಲು ಸೇವೆ ಮಾಡಬೇಕು. ಗುರು ಸೇವೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ.
– ಯೋಗಾನಂದ ಸರಸ್ವತೀ ಶ್ರೀ