ಸುಳ್ಯ: ಎಲಿಮಲೆ ಹಯಾ ತುಲ್ ಇಸ್ಲಾಂ ದರ್ಸ್ ವಿದ್ಯಾರ್ಥಿ ಸಂಘಟನೆ ಮುರ್ಶಿದುಲ್ ಅನಾಂ ಸಾಹಿತ್ಯ ಸಮಾಜ ಇದರ 29ನೇ ವಾರ್ಷಿ ಕೋತ್ಸವದ ಅಂಗವಾಗಿ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣವು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಜಾಲ್ಸೂರು ಖತೀಬ ಅಬೂಬಕರ್ ಫೈಝಿ ಕುಂಬ್ಲಾಜೆ ಮತ್ತು ವಾಮಂಜೂರು ಖತೀಬ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಪ್ರಭಾಷಣ ನೆರವೇರಿಸಿದರು.
ದುವಾ ನೇತೃತ್ವ ವಹಿಸಿದ ಮುಹ್ಸಿನ್ ಅಲವಿಕೋಯ ತಂಙಳ್ ಕಲ್ಲೇರಿ ಮಾತನಾಡಿ, ಧಾರ್ಮಿಕ ವಿಚಾರ ಅರಿತುಕೊಂಡು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ. ತನ್ಮೂಲಕ ಇಹಪರ ಜಯಕ್ಕೂ ಕಾರಣವಾ ಗಬೇಕು ಎಂದರು.
ಜಮಾಅತ್ ಅಧ್ಯಕ್ಷ ಇಕ್ಬಾಲ್, ಜಮಾಅತ್ ಮಾಜಿ ಅಧ್ಯಕ್ಷ ಮೂಸಾ ಹಾಜಿ, ಸುಳ್ಯ ಅನ್ಸಾರ್ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಫ, ಜಮಾಅತ್ ಆಡಳಿತ ಕಾರ್ಯದರ್ಶಿ ಟಿ.ವೈ. ಇಬ್ರಾಹಿಂ, ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ, ನುಸ್ರತ್ ಕಾರ್ಯದರ್ಶಿ ಸೂಫಿ ಎಲಿ ಮಲೆ, ಜೀರ್ಮುಕ್ಕಿ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ಜಿ., ಜೀರ್ಮುಕ್ಕಿ ಸದರ್ ಮುಅಲ್ಲಿಂ ಸೂಫಿ ಮುಸ್ಲಿಯಾರ್, ಮಾಸ್ ಅಧ್ಯಕ್ಷ ಶಫೀಕ್ ಮುಸ್ಲಿಯಾರ್, ಮೆತ್ತಡ್ಕ ಮದ್ರಸ ಸದರ್ ಮುಅಲ್ಲಿಂ ನಿಝಾಮುದ್ದೀನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಮಹಮ್ಮದ್ ಸಖಾಫಿ ಸ್ವಾಗತಿಸಿ, ವಂದಿಸಿದರು.
ಸಮ್ಮಾನ
ಎಲಿಮಲೆ ಮುದರಿಸ್ ಅಬ್ದುರ್ರ ಝಾಕ್ ಸಖಾಫಿ ಕಳಂಜಿಬೈಲ್ ಉದ್ಘಾಟಿ ಸಿದರು. ಅನಂತರ ಉನ್ನತ ವ್ಯಾಸಂಗಕ್ಕಾಗಿ ತೆರಳು ತ್ತಿರುವ ವಿದ್ಯಾರ್ಥಿಗಳನ್ನು ಮಾಸ್ ಹಾಗೂ ಜಮಾಅತ್ ವತಿಯಿಂದ ಬೀಳ್ಕೊಡ ಲಾಯಿತು. ಜಮಾಅತ್ನ ವಿವಿಧ ಸಮಾಜ ಸೇವಕರನ್ನು ಗುರುತಿಸಿ ಸಮ್ಮಾನಿಸಲಾಯಿತು. ಇದೇ ವೇಳೆ ಮಾಸ್ ಇದರ ಅಲ್ ಮುರ್ಷಿದ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.