ಅಳಿಕೆ : ಚಪ್ಪರಕ್ಕೆ ನಾಲ್ಕು ಕಂಬವಿ ದ್ದಂತೆ ಬದುಕಿಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಕಂಬಗಳಿವೆ. ಮೊದಲ ನೆಯ ಕಂಬ ಧರ್ಮವು ಸಶಕ್ತವಾಗಿದ್ದರೆ ಉಳಿದವುಗಳೂ ಸರಿಯಾಗಿ ಮುಂದುವರಿ ಯಲು ಸಾಧ್ಯವಾಗುತ್ತದೆ. ದೇವಾಲಯ ನಿರ್ಮಾಣವೆಂದರೆ ಧರ್ಮ ಸಂಸ್ಕೃತಿಯ ಅನಾ ವರಣ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಗುರುವಾರ ಜೆಡ್ಡು ಪದ್ಮಗಿರಿಯಲ್ಲಿ ಎ. 26ರಿಂದ ಎ. 29ರವರೆಗೆ ನಡೆಯ ಲಿರುವ ಶ್ರೀ ಆದಿ ಧನ್ವಂತರಿ ಕ್ಷೇತ್ರದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶದ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿಸಿ ಆಶೀರ್ವಚನ ನೀಡಿದರು.
ಪದ್ಮಗಿರಿ ಶ್ರೀ ಆದಿ ಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಜೆಡ್ಡು ನಾರಾಯಣ ಭಟ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಟಿ. ತಾರಾನಾಥ ಕೊಟ್ಟಾರಿ ಫರಂಗಿಪೇಟೆ, ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್, ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ತಾಮ್ರದ ಶಿಲ್ಪಿ ಯೋಗಿರಾಜ್ ಬಿಜೂರು ಹಾಗೂ ಶಿಲಾ ಕೆಲಸ ನಿರ್ವಹಿಸುತ್ತಿರುವ ಪದ್ಮನಾಭ ಅವರಿಗೆ ಕಾಮಗಾರಿ ನಡೆಸಲು ಮೊತ್ತವನ್ನು ಹಸ್ತಾಂತರಿಸಲಾಯಿತು.ಪ್ರಚಾರ ಸಮಿತಿ ಸಂಚಾಲಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಡಾ| ಮನೋರಮಾ ಜಿ.ಭಟ್ ಆಶಯಗೀತೆ ಹಾಡಿದರು. ಬಳಿಕ ಸಮಿತಿಯ ಸಮಾ ಲೋಚನೆ ಸಭೆ ನಡೆಯಿತು.
ಸಂಸ್ಕೃತಿ ಉಳಿಕೆ
ಅಳಿಕೆ ಎಂದರೆ ಉಳಿಕೆ. ದೇವಾಲಯದ ನಿರ್ಮಾಣದ ಹೆಸರಲ್ಲಿ ಸಂಸ್ಕೃತಿಯ ಉಳಿಕೆ ಆಗುತ್ತಿರುವುದು ಶ್ಲಾಘನೀಯ. ಚಪ್ಪರದ ಮೂಲಕ ನೆರಳು, ದೇಗುಲವು ಬದುಕಿಗೇ ನೆರಳು, ನೆಮ್ಮದಿಯ ಕೇಂದ್ರ. ಧನ್ವಂತರಿಯೇ ಈ ದೇಗುಲದ ಶಕ್ತಿ.
– ಶ್ರೀ ಗುರುದೇವಾನಂದ ಸ್ವಾಮೀಜಿ