Home ಧಾರ್ಮಿಕ ಕಾರ್ಯಕ್ರಮ ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ರಜತ ಸಂಭ್ರಮ

ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ರಜತ ಸಂಭ್ರಮ

ದುರ್ಗಾ ಹೋಮ, ಪವಮಾನ ಅಭಿಷೇಕ

1758
0
SHARE
ದುರ್ಗಾ ಹೋಮ ನಡೆಯಿತು.

ಪುಂಜಾಲಕಟ್ಟೆ : ಬಂಟ್ವಾಳ ತಾ| ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಇದರ ರಜತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ರಜತ ಮಹೋತ್ಸವ ಆಚರಣೆ ಸಮಿತಿ ವತಿಯಿಂದ ರಾಯಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಫೆ. 14ರ ವರೆಗೆ ನಡೆಯಲಿರುವ ಅಖಂಡ ಭಜನ ಸಪ್ತಾಹ ಕಾರ್ಯಕ್ರಮದಲ್ಲಿ ಶುಕ್ರವಾರ ದುರ್ಗಾ ಹೋಮ ನಡೆಯಿತು.

ಕ್ಷೇತ್ರದ ತಂತ್ರಿ ವೇ| ಮೂ| ಬಾಲಕೃಷ್ಣ ಪಾಂಗಣ್ಣಾಯ ನಡ್ವಂತಾಡಿ ಅವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಹರೀಶ್‌ ಭಟ್‌ ಸಹಕಾರದಲ್ಲಿ ಬೆಳಗ್ಗೆ ಮಹಾಪೂಜೆ, ಪವಮಾನ ಅಭಿಷೇಕ, ಸಂಜೆ ಸಂಜೆ ಆಶ್ಲೇಷಾ ಪೂಜೆ, ರಾತ್ರಿ ರಂಗ ಪೂಜೆ ನಡೆಯಿತು. 11 ಭಜನ ತಂಡಗಳು ಅಹರ್ನಿಶಿ ಭಜನ ಕಾರ್ಯಕ್ರಮ ನಡೆಸಿದವು.

ದುರ್ಗಾ ಹೋಮ ಸೇವಾಕರ್ತೃ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಭಜನ ಮಂಡಳಿ ಅಧ್ಯಕ್ಷ ದಿನೇಶ್‌ ಭಟ್‌ ದೈಲ, ಗೌರವಾಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ, ರಜತ ಮಹೋತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷರಾದ ರಮೇಶ್‌ ಭಟ್‌ ಮಾದೇರಿ, ರಾಮಚಂದ್ರ ಭಟ್‌ ದೈಲ, ಪ್ರ. ಕಾರ್ಯದರ್ಶಿ ಗಣೇಶ್‌ ಬರೆಬಾಯಿ, ಭಜನ ಮಂಡಳಿ ಸಂಚಾಲಕ, ಆಚರಣೆ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಪದಾಧಿಕಾರಿಗಳಾದ ವಸಂತ ಗೌಡ ಮುದ್ದಾಜೆ, ಸಂತೋಷ್‌ ಕುಮಾರ್‌ ಬೆಟ್ಟು ರಾಯಿ, ಪರಮೇಶ್ವರ ಪೂಜಾರಿ ರಾಯಿ ಹಾಗೂ ಭಜನ ಮಂಡಳಿ, ಆಚರಣೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಇಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,
ಫೆ. 10ರಂದು ಬೆಳಗ್ಗೆ ಮಹಾಪೂಜೆ, ಬಿಲ್ವಾರ್ಚನೆ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ 4 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಂಗಪೂಜೆ,
ಅನ್ನ ಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here