ಕರ್ವಾಲು (ಕಾರ್ಕಳ): ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಸಾನ್ನಿಧ್ಯಕ್ಕೆ ಪ್ರತೀ ವರ್ಷ ನೀಡುವ ಭೇಟಿ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್, ಪ್ರಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದರು.
ಕರ್ವಾಲು ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಹೂವಿನ ಪೂಜೆ ಮುಂತಾದ ಧಾರ್ಮಿಕ ಸೇವೆಗಳನ್ನು ಸಲ್ಲಿಸಿದರು. ಬಳಿಕ ಮಾಧ್ಯಮ ಹಾಗೂ ಆಹ್ವಾನಿತರ ಜತೆ ಮಾತನಾಡಿ, ಕುಟುಂಬದ ಮೂಲಕ್ಕೆ ಬರುವ ಆಹ್ಲಾದಕರ ಅನುಭವವನ್ನು ನಾನು ಇಲ್ಲಿ ಪಡೆಯುತ್ತಿದ್ದೇನೆ. ಈವರೆಗೆ ಹತ್ತು ಬಾರಿ ಇಲ್ಲಿಗೆ ಬಂದಿದ್ದೇನೆ; ಇನ್ನು ಮುಂದೆಯೂ ಬರುತ್ತೇನೆ. ಕರ್ವಾಲಿನ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದರು…