Home ಧಾರ್ಮಿಕ ಕಾರ್ಯಕ್ರಮ ರಥಬೀದಿ: ವೆಂಕಟ್ರಮಣ ದೇಗುಲದಲ್ಲಿ ವಿಶೇಷ ಪೂಜೆ

ರಥಬೀದಿ: ವೆಂಕಟ್ರಮಣ ದೇಗುಲದಲ್ಲಿ ವಿಶೇಷ ಪೂಜೆ

Rathabidhi: Venkataramana Temple

1790
0
SHARE

ಮಹಾನಗರ: ಪುರುಷೋತ್ತಮ ಮಾಸವನ್ನು ಮೇ 16ರಿಂದ ಜೂ. 13ರ ವರೆಗೆ ಆಚರಿಸಲಾಗುತ್ತಿದ್ದು ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜೂ. 11ರಂದು ಬೆಳಗ್ಗೆ ಅಧಿಕ ಮಾಸ ಉದ್ಯಾಪನ ಪ್ರಯುಕ್ತ ಶ್ರೀ ರಾಧಿಕಾ ಪುರುಷೋತ್ತಮ ದೇವರ ಪ್ರಿತ್ಯರ್ಥ ಹವನ ಹಾಗೂ ಸಂಜೆ ಮಾತೆಯರಿಂದ ಶ್ರೀ ರಾಧಿಕಾ ಕೃಷ್ಣ ದೇವರಿಗೆ ಕುಂಕುಮಾರ್ಚನೆ ನಡೆಯಿತು.

ಪ್ರತೀ ದಿನ ಸಂಜೆ ಪುರುಷೋತ್ತಮ ಮಹಾತ್ಮೆ ಎಂಬ ಪ್ರವಚನವನ್ನು ಪಂ| ಕಾಶೀನಾಥ್‌ ಆಚಾರ್ಯ ನಡೆಸಿಕೊಟ್ಟರು. ಅಧಿಕ ಮಾಸದಲ್ಲಿ ನಡೆಯುವ ಸೇವೆಗಳಾದ ಬ್ರಾಹ್ಮಣ ಸಂತರ್ಪಣೆ, ಗಂಗಾಭಿಶೇಕ, ಸಹಸ್ರ ನಾಮಾರ್ಚನೆ, ಪುಳಕಾಭಿಶೇಕ, ಗೋ ಪೂಜೆ, ರಾತ್ರಿ ಅಲಂಕಾರ ಪೂಜೆ, ತುಪ್ಪದ ನಂದಾದೀಪ ಮುಂತಾದ ಸೇವೆಗಳನ್ನು ಸಲ್ಲಿಸುವ
ಅವಕಾಶ ಭಕ್ತರಿಗೆ ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here