Home ಧಾರ್ಮಿಕ ಕಾರ್ಯಕ್ರಮ ರಥಬೀದಿ: ವೀರ ವೆಂಕಟೇಶ ದೇವರ ಅವಭೃಥೋತ್ಸವ

ರಥಬೀದಿ: ವೀರ ವೆಂಕಟೇಶ ದೇವರ ಅವಭೃಥೋತ್ಸವ

364
0
SHARE
ವೀರ ವೆಂಕಟೇಶ ದೇವರ ಅವಭೃಥೋತ್ಸವ ನಡೆಯಿತು.

ಮಹಾನಗರ: ರಥಬೀದಿ ಶ್ರೀ ವೆಂಕಟಮಣ ದೇವಸ್ಥಾನದಲ್ಲಿ ವೀರ ವೆಂಕಟೇಶ ದೇವರ ರಥೋತ್ಸವದ ಅಂಗವಾಗಿ ಅವಭೃಥೋತ್ಸವ ಗುರುವಾರ ಸಂಪನ್ನಗೊಂಡಿತು. ಬೆಳಗ್ಗೆ ಶ್ರೀ ದೇವರ ದ್ವಾರ ಪೂಜೆಯ ಬಳಿಕ ಸಮಾಜ ಬಾಂಧವರಿಗೆ ಮಡಸ್ತಾನ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.

ಚೂರ್ಣೋತ್ಸವ, ವಸಂತ ಪೂಜೆ ಹಾಗೂ ಯಜ್ಞ ವಿಸರ್ಜನೆಯ ಬಳಿಕ ಸ್ವರ್ಣ ಪಲ್ಲಂಕಿಯಲ್ಲಿ ಆರೂಢನಾದ ಶ್ರೀ ವೀರ ವೆಂಕಟೇಶ ದೇವರ ಉತ್ಸವ ಸಾಗಿತು. ಸಂಜೆ ವಿ.ಟಿ.ರಸ್ತೆಯಲ್ಲಿರುವ ದೇಗುಲದ ಕೆರೆಯಲ್ಲಿ ದೇವರ ತೀರ್ಥಸ್ನಾನದ ಬಳಿಕ ಪೂಜೆ ನಡೆಯಿತು. ರಾತ್ರಿ ಧ್ವಜ ವಿಸರ್ಜನೆ, ಸಂಪ್ರೋಕ್ಷಣೆ, ರಾತ್ರಿ ಪೂಜೆ, ಮಹಾಪೂಜೆ, ವಸಂತ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here