Home ನಂಬಿಕೆ ಸುತ್ತಮುತ್ತ ಪುಣ್ಯ ಸಂಪಾದನೆಗೆ ಪವಿತ್ರ ತಿಂಗಳು ರಮ್ಜಾನ್‌

ಪುಣ್ಯ ಸಂಪಾದನೆಗೆ ಪವಿತ್ರ ತಿಂಗಳು ರಮ್ಜಾನ್‌

ಜೂ. 4ರ ವರೆಗೆ ವ್ರತಾಚರಣೆ

811
0
SHARE

ಮುಸಲ್ಮಾನ್‌ ಬಂಧುಗಳು ತಿಂಗಳಾದ್ಯಂತ ಉಪವಾಸ ವ್ರತಾಚರಣೆಯ ಮೂಲಕ ಪವಿತ್ರ ರಮ್ಜಾನ್‌ ಅನ್ನು ನಿಷ್ಠೆಯಿಂದ ಆಚರಿಸುತ್ತಾರೆ. ಈ ಪವಿತ್ರ ತಿಂಗಳಲ್ಲಿ ನಮಾಝ್, ಕುರಾನ್‌ ಪಠನ ಹಾಗೂ ಬಡವರಿಗೆ ಜಕಾತ್‌ (ದಾನ) ನೀಡುವುದಲ್ಲದೇ ವೈಯಕ್ತಿಕವಾಗಿ ಉಪವಾಸದ ಮೂಲಕ ಆಚರಿಸುತ್ತಾರೆ. ರಮ್ಜಾನ್‌ ಪಾವಿತ್ರ್ಯತೆ ಸಾರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈದ್‌-ಉಲ್-ಫಿತ್ರ ಅನ್ನು ರಮ್ಜಾನ್‌ (ರಮ್‌ದಾನ್‌) ಹಬ್ಬ ಎನ್ನಲಾಗುತ್ತದೆ. ರಮ್‌ದಾನ್‌ ಆರಾಧನೆ, ದಾನ- ಧರ್ಮ, ಕುರಾನ್‌ ಪಾರಾಯಣ, ಉಪವಾಸ ವ್ರತಾಚರಣೆ ಮೂಲಕ ಪುಣ್ಯ ಸಂಪಾದನೆಗೆ ಇರುವ ಪವಿತ್ರ ತಿಂಗಳು ಎಂದೇ ಇದನ್ನು ಪರಿಗಣಿಸಲಾಗುತ್ತದೆ.

ಇಸ್ಲಾಮಿಕ್‌ ಪದ್ಧತಿಯ ಹಿಜರೀ ವರ್ಷದಲ್ಲಿ ಮೊಹರಂ, ಸಫ‌್ಫರ್‌, ರಬ್ಬೀಲ್ ಅವ್ವಲ್, ರಬ್ಬಿಲ್ ಆಖರ್‌, ಜುಮಾದಿಲ್ ಅವ್ವಲ್, ಜಿಮಾದಿಲ್ ಆಖರ್‌, ರಜ್ಜಬ್‌, ಶಾಬಾನ್‌, ರಮ್ಜಾನ್‌, ಶವ್ವಾಲ್, ಜಿಲ್ ಖೈರ್‌ ಮತ್ತು ಜಿಲ್ ಹಜ್‌ ಎಂಬ ಹನ್ನೆರೆಡು ತಿಂಗಳ ಪೈಕಿ 9ನೇ ರಮ್ಜಾನ್‌ ತಿಂಗಳ ಕೊನೆಯ ದಿನ ಚಂದ್ರ ದರ್ಶನವಾದ ತತ್‌ಕ್ಷಣ ಉಪವಾಸ ವ್ರತಾಚರಣೆಯನ್ನು ಕೊನೆಗೊಳಿಸುವುದು ಮತ್ತು ಮುಂದಿನ ದಿನ ಈದ್ಗಾ ಯಾ ಮಸೀದಿಗಳಲ್ಲಿ ಕೃತಾರ್ಥ ಭಾವದಿಂದ ಜಗದೊಡೆಯನಿಗೆ ಸಾಮೂಹಿಕ ನಮಾಝ್ ಸಲ್ಲಿಸುವ ಸಂಭ್ರಮೋಲ್ಲಾಸದ ಆಚರಣೆಯೇ ಈದ್‌-ಉಲ್-ಫಿತ್ರ.

ರಮ್ಜಾನ್‌ ವ್ರತಾಚರಣೆ ಜೂನ್‌ 4ರ ವರೆಗೆ ಇರಲಿದೆ. ಮುಸ್ಲಿಂ ಸಮುದಾಯದ ಬಹುತೇಕ ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ.

ವ್ರತಾಚರಣೆ ಯಾಕೆ ?
ಆಸ್ತಿ-ಆಂತಸ್ತು, ಆಡಂಬರದ ಬದಕನ್ನು ಬಯಸುತ್ತಾ ಬದುಕಿನಲ್ಲಿ ಮಾಡಬಹುದಾದ ಧರ್ಮ ನಿಷಿದ್ಧ ಪಾಪ ಕಾರ್ಯಗಳಿಂದ ತಡೆದು, ಆಧ್ಯಾತ್ಮ ಚಿಂತನೆ ಮತ್ತು ಆರಾಧನೆಯ ಮೂಲಕ ಮನುಕುಲವನ್ನು ನರಕದಿಂದ ನಾಕಾದೆಡಗೆ ಪಯಣಿಸುವಂತೆ ಪ್ರೇರೇಪಿಸುವ ಸನ್ಮಾರ್ಗವೇ ಪರಿಶುದ್ಧ ರಮ್ಜಾನ್‌ ವ್ರತಾಚರಣೆ.

ದೇವನೊಬ್ಬನೇ, ಮಹಮ್ಮದ್‌ (ಸ.ಅ.ಸ) ಅವರು ಅವನ ಪ್ರವಾದಿವರ್ಯರು ಎಂಬ ಸಂಕಲ್ಪವೂ ಸಹಿತ ಇಸ್ಲಾಂನ ಪಂಚಸ್ತಂಭಗಳಲ್ಲಿ ರಮ್ಜಾನ್‌ ತಿಂಗಳ ಉಪವಾಸದ ಆಚರಣೆಯೂ ಮಹತ್ವದಾಗಿದೆ. ದೇವರು ಮನುಕುಲದ ಇಹ-ಪರ ಶ್ರೇಯಸ್ಸಿಗೆ ಪರಿಶುದ್ಧ ಗ್ರಂಥ ಖುರಾನ್‌ನನ್ನು ಪ್ರವಾದಿ ಮಹಮ್ಮದ್‌ (ಸ.ಅ.ಸ) ಮೂಲಕ ಭೂಮಿಗೆ ಅವತೀರ್ಣಗೊಳಸಿದ ತಿಂಗಳೂ ರಮ್ಜಾನ್‌ ಆಗಿದೆ.

ಯಾರಿಗೆ ವಿನಾಯಿತಿ ?
ಮಕ್ಕಳು, ವೃದ್ಧರು, ಯಾತ್ರಿಕರು, ಋತುಸ್ರಾವ ಅವಧಿಯ ಮಹಿಳೆಯರು, ಬಾಣಂತಿಯರು, ರೋಗಿಗಳು, ದೈಹಿಕ ಮತ್ತು ಮಾನಸಿಕ ಅಸ್ವಸ್ಥತರಿಗೆ ವಿನಾಯಿತಿ ಇದೆ. ಕಾಯಾ- ವಾಚಾ- ಮನಸಾ- ಸತ್‌ಚಿಂತನೆ, ಆರಾಧನೆ, ಸತ್ಕಾರ್ಯಗಳಿಂದ ಅಂತರಂಗವನ್ನು ಶುದ್ಧೀಕರಿಸುವುದು. ತನ್ನ ಮತ್ತು ಮನುಕುಲದ ಇಹಪರದ ಒಳಿತಿಗಾಗಿ ಪ್ರಾರ್ಥಿಸುತ್ತಾ ವಿಶ್ವವೇ ಶಾಂತಿಯಿಂದಿರಲಿ ಎಂಬುವುದೇ ರಮ್ಜಾನ್‌ ಮಾಸ ಮತ್ತು ಈದ್‌-ಉಲ್- ಫಿತ್ರ ಆಚರಣೆಯ ಆದರ್ಶ ಆಶಯ.

ಹಸನ್‌ ವಿಟ್ಲ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here