ಮುಳ್ಳೇರಿಯ: ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಕೂಡಾ ಯಶಸ್ಸು ಖಂಡಿತಾ ಸಾಧ್ಯ ಎಂದು ಹಿಂದೂ ಐಕ್ಯವೇದಿಯ ಜಿಲ್ಲಾ ಕೋಶಾಕಾರಿ ವಾಮನ ಆಚಾರ್ಯ ಬೋವಿಕ್ಕಾನ ಹೇಳಿದರು.
ಅವರು ಮೊಗ್ರಾಲ್ ಪುತ್ತೂರು ಪಂಜದಗುಡ್ಡೆ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಗೋಪಾಲಕೃಷ್ಣ ಬಾಲಗೋಕುಲದಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ನಡೆದ ರಾಮಾಯಣ ಪ್ರವಚನವನ್ನು ನಡೆಸಿಕೊಟ್ಟರು. ಮಂದಿರದ ಉಪಾಧ್ಯಕ್ಷ ರಮೇಶ್ ಪಂಜಸದ ಗುಡ್ಡೆ ಅಧ್ಯಕ್ಷತೆ ವಹಿಸಿದರು. ಸಂದೀಪ್, ಅಭಿಲಾಷ್, ಪ್ರಶಾಂತ್, ರಾಜೇಶ್ ಮಂಟಮೆ, ಮೋಹನ್, ಬಾಲ ಪಾಟಾಳಿ, ಶರತ್, ಗಣೇಶ್, ಸಜಿತ್, ಮಹೇಶ್, ಬಾಲಗೋಕುಲ ಶಿಕ್ಷಕಿಯರಾದ ಆಶಾ, ತನುಶ್ರೀ ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಬಾಲಗೋಕುಲ ಪ್ರಮುಖ್ ಭಾಸ್ಕರ ಮಡಲ ಸ್ವಾಗತಿಸಿದರು.ದಯ ಮೋಹನ್ ವಂದಿಸಿದರು.