Home ಧಾರ್ಮಿಕ ಸುದ್ದಿ ರಾಮಾಯಣ ಹರಿಕಥಾ ಕಾಲಕ್ಷೇಪ

ರಾಮಾಯಣ ಹರಿಕಥಾ ಕಾಲಕ್ಷೇಪ

1350
0
SHARE

ಕೊಡಿಯಾಲಬೈಲ್‌: ನಗರದ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ವಿಪ್ರ ಸಮಾಗಮ ವೇದಿಕೆ ವತಿಯಿಂದ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ ಜರಗಿತು.

ಕುಂದಾಪುರದ ಹಾಲಾಡಿ ಸ.ಪ.ಪೂ. ಕಾಲೇಜು ಉಪನ್ಯಾಸಕ ಹರಿದಾಸ ಗಣಪತಿ ಹೆಗಡೆ ಗೋಪಿ ಅವರು ರಾಮಾಯಣದ ಸುಂದರಕಾಂಡವನ್ನು ಪ್ರಸ್ತುತಪಡಿಸಿದರು. ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ್‌ ಭಟ್ ಅಭಿನಂದಿಸಿದರು.

ಜಿಲ್ಲಾ ದ್ರಾವಿಡ ಬ್ರಾಹ್ಮಣ ಅಸೋಸಿ ಯೇಶನ್‌ ಅಧ್ಯಕ್ಷ ಪಿ. ಪ್ರಭಾಕರ ರಾವ್‌ ಪೇಜಾವರ ಮುಖ್ಯ ಅತಿಥಿಯಾಗಿದ್ದರು. ಶೋಭಾ ಶ್ಯಾಮ ಸುಂದರ್‌, ರಾಜಶ್ರೀ ಆಚಾರ್‌, ಪೂರ್ಣಿಮಾ ಪ್ರಶಾಂತ್‌ ಶಾಸ್ತ್ರಿ, ಲತಾ ನಾಗರಾಜ, ವಾಣಿದೇವಿ, ರಾಮಚಂದ್ರ ಆಚಾರ್ಯ ಕೆ.ಎಲ್‌., ಉಪಾಧ್ಯಾಯ ಪ್ರಕಾಶ್‌ ರಾವ್‌, ಹರೀಶ್‌ ರಾವ್‌, ಶ್ಯಾಮ ಸುಂದರ್‌, ಸುಧಾಕರ ಭಟ್ ಉಪಸ್ಥಿತರಿದ್ದರು.

ವೇದಿಕೆ ಅಧ್ಯಕ್ಷ ಪಿ. ರಾಮಕೃಷ್ಣ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಪೂರ್ಣಿಮಾ ಪ್ರಭಾಕರ ರಾವ್‌ ಪೇಜಾವರ ನಿರೂಪಿಸಿದರು. ಗಜಾನನ ಯಾಜಿ, ಕಮಲಾಕರ ಹೆಗಡೆ ಸಹಕರಿಸಿದರು.

LEAVE A REPLY

Please enter your comment!
Please enter your name here