ಪಣಂಬೂರು: ಕುಳಾಯಿ ರಾಮನವಮಿ ಆರಾಧನಾ ಮಂಡಳಿಯ ವತಿಯಿಂದ ಜರಗುವ ರಾಮನವಮಿ ಉತ್ಸವವು ಮಾರ್ಚ್ 21ರಿಂದ 25ರ ವರೆಗೆ ಜರಗಲಿದ್ದು, ಇದರ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಶ್ರೀ ನಂದ ನೇಶ್ವರ ದೇವಸ್ಥಾನದಲ್ಲಿ ಜರಗಿತು.
ವೇ| ಮೂ| ಕೃಷ್ಣರಾಜ ತಂತ್ರಿ ಕುಡುಪು ಅವರು ಆಶೀರ್ವಚನ ನೀಡಿದರು. ಆರಾಧನಾ ಮಂಡಳಿಯ ಅಧ್ಯಕ್ಷ ಎಂ. ವಿಷ್ಣುಮೂರ್ತಿ ಕುಳಾಯಿ, ಕಾರ್ಯದರ್ಶಿ ಯೋಗೀಶ್ ಕಾಂಚನ್, ಕೋಶಾಧಿಕಾರಿ ಸತೀಶ್ ಸದಾನಂದ್, ಅನಂತ ಐತಾಳ್, ರಮಾ ವೆಂಕಟ್ರಾವ್, ಸುಮಾ ಆಚಾರ್, ಗಣಪತಿ ಐತಾಳ್, ಎಂ. ಸದಾಶಿವ, ಪರಮೇಶ್ವರ ಐತಾಳ್, ಆನಂದ ಬಾಬು ಉಪಸ್ಥಿತರಿದ್ದರು.