Home ಧಾರ್ಮಿಕ ಕಾರ್ಯಕ್ರಮ ರಾಮಕುಂಜ: ದೈವಗಳ ನೇಮ ಸಂಪನ್ನ

ರಾಮಕುಂಜ: ದೈವಗಳ ನೇಮ ಸಂಪನ್ನ

459
0
SHARE
ರಾಮಕುಂಜ ಜಾತ್ರೆಯ ಪ್ರಯುಕ್ತ ದೈವಗಳ ನೇಮ ನೆರವೇರಿತು.

ಕಡಬ : ರಾಮಕುಂಜದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ಶುಕ್ರವಾರ ಮತ್ತು ಶನಿವಾರ ದೈವಗಳ ನೇಮ ನಡೆಯಿತು.

ಶುಕ್ರವಾರ ಬೆಳಗ್ಗೆ ಸಂಪ್ರೋಕ್ಷಣೆ, ನಾಗಾರಾಧನೆ ನಡೆಯಿತು. ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನೆರವೇರಿತು. ಶನಿವಾರ ಬೆಳಗ್ಗೆ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ ಹಾಗೂ ಗುಳಿಗ ದೈವಗಳ ನೇಮ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ರವಿ ಕೆದಿಲಾಯ ಬೆದ್ರುಮಾರು, ತೇಜಕುಮಾರ್‌ ರೈ ವಳೆಂಜ, ಅಂಗಾರ ಅಮೈ, ಹೊನ್ನಪ್ಪ ಗೌಡ ಬಾಂತೊಟ್ಟು, ರೇವತಿ ಹಲ್ಯಾರ, ನಾಗಪ್ಪ ಗೌಡ ಖಂಡಿಗ, ಆಶಾಲತಾ ಕಲ್ಲೇರಿ, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here