ರಾಮಕುಂಜ : ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಅಂಗಣಕ್ಕೆ ಕಲ್ಲುಹಾಸುವ ಬಗ್ಗೆ ಅನುಜ್ಞಾ ಕಲಶ ಶನಿವಾರ ಬೆಳಗ್ಗೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಅನುಜ್ಞಾ ಕಲಶ ನೆರವೇರಿಸಿದರು.
ದೇವಾಲಯದ ಪ್ರಧಾನ ಅರ್ಚಕ ಅನಂತ ಉಡುಪ, ಅರ್ಚಕ ಶ್ರೀನಿಧಿ ಜೋಶಿ ಅವರು ಪೂಜಾ ವಿಧಿ – ವಿಧಾನಗಳಲ್ಲಿ ಸಹಕರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ರವಿ ಕೆದಿಲಾಯ, ತೇಜಕುಮಾರ್ ರೈ, ನಾಗಪ್ಪ ಗೌಡ, ಅಂಗಾರ ಅಮೈ, ಉತ್ಸವ ಸಮಿತಿ ಅಧ್ಯಕ್ಷ ಮಾಧವ ಆಚಾರ್ ಇಜ್ಜಾವು, ಸಮಿತಿಗಳ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಕಲ್ಲೇರಿ, ಕೆ. ಸೇಸಪ್ಪ ರೈ, ಸತೀಶ್ ಭಟ್, ನರಹರಿ ಇರ್ಕಿ, ಕೃಷ್ಣಮೂರ್ತಿ ಕೆರೆಕರೆ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಶೈಲಜಾ, ಆಲಂಕಾರು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋನಪ್ಪ ಬೊಳ್ಳರೋಡಿ, ದುರ್ಗಾಪ್ರಸಾದ್ ಸುಣ್ಣಾಲ, ಜಯರಾಜ್ ಬರೆಂಬಾಡಿ ಉಪಸ್ಥಿತರಿದ್ದರು.
ಕೂಪನ್ ಬಿಡುಗಡೆ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ಅಂಗಣಕ್ಕೆ ಕಲ್ಲು ಹಾಸುವ ಯೋಜನೆ ಹಾಕಿಕೊಳ್ಳಲಾಗಿದೆ. ಭಕ್ತರಿಂದ ದೇಣಿಗೆ ಸಂಗ್ರಹಕ್ಕೆ 1,000
ರೂ. ಮುಖಬೆಲೆಯ ಕೂಪನ್ಗಳನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಆಚಾರ್ ಇಜ್ಜಾವು ಬಿಡುಗಡೆ ಮಾಡಿದರು. ವಾರ್ಷಿಕ ಜಾತ್ರೆಯೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ತಿಳಿಸಿದರು. ಪೆರ್ನೆ ಗಣೇಶ್ ಮಾರ್ಬಲ್ಸ್ನ ಗಣೇಶ್ಚಂದ್ರ ಭಟ್ ಅವರಿಗೆ ಮುಂಗಡ ನೀಡಿ, ಕೆಲಸ ಪ್ರಾರಂಭಿಸಲು ವೀಳ್ಯ ನೀಡಲಾಯಿತು.