Home ಧಾರ್ಮಿಕ ಸುದ್ದಿ ರಾಮಕೃಷ್ಣ ಭಜನಾ ಮಂದಿರ ವಾರ್ಷಿಕೋತ್ಸವ

ರಾಮಕೃಷ್ಣ ಭಜನಾ ಮಂದಿರ ವಾರ್ಷಿಕೋತ್ಸವ

754
0
SHARE

ಉಡುಪಿ: ಬಿಲ್ಲವ ಸೇವಾ ಸಂಘ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾಮಂಡಳಿ ಕುತ್ಪಾಡಿ, ಉಡುಪಿ ಇದರ 45ನೇ ವಾರ್ಷಿಕೋತ್ಸವವು ಸಂಘದ ಅಧ್ಯಕ್ಷ ನಾರಾಯಣ ಬಿ.ಎಸ್‌. ಅವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರಗಿತು.

ಕುತ್ಪಾಡಿ ಶ್ರೀ ಕಾನಂಗಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್‌, ಉದ್ಯಮಿ ನಾರಾಯಣ ಸುವರ್ಣ ಕಪ್ಪೆಟ್ಟು, ಕಡೆಕಾರು ಗ್ರಾ.ಪಂ. ರಘುನಾಥ್‌ ಕೋಟ್ಯಾನ್‌, ಮಹಿಳಾ ಘಟಕದ ಸಂಚಾಲಕಿ ಶಾರದಾ ರಾಘವೇಂದ್ರ ಉಪಸ್ಥಿತರಿದ್ದರು.

ಗುರು ತೋನ್ಸೆ ಜಯಂತ್‌ ಕುಮಾರ್‌ ಅವರು ಗುರುವಂದನೆ ಸ್ವೀಕರಿಸಿದರು. ಹವ್ಯಾಸಿ ಕಲಾವಿದ ಸೋಮಪ್ಪ ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಹರೀಶ್‌ ಸುವರ್ಣ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಸುರೇಶ್‌ ಸುವರ್ಣ ವಂದಿಸಿ, ಕೋಶಾಧಿಕಾರಿ ಉದಯ್‌ ಎಸ್‌. ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here