ಕರುನಾಡಿಗೂ, ಶ್ರೀರಾಮನಿಗೂ ಒಂದು ಅಪೂರ್ವ ನಂಟು. ರಾಮನ ಭಂಟ ಹನುಮಂತ ಹುಟ್ಟಿದ (ಕಿಷ್ಕಿಂಧೆ) ಪುಣ್ಯಭೂಮಿ ಇದು. ಅಪಹರಣಕ್ಕೊಳಗಾದ ಸೀತೆಯ ಬಗ್ಗೆ ರಾಮ ಆತಂಕದಲ್ಲಿದ್ದಾಗ, ಅವನೊಳಗೆ ಭರವಸೆ ತುಂಬಿದ್ದೇ ಆಂಜನೇಯ. ಮರ್ಯಾದಾ ಪುರುಷೋತ್ತಮನಿಗೆ ಇಲ್ಲಿಂದಲೇ ಸೀತಾಶೋಧದ ಹಾದಿ ಸುಗಮವಾಯಿತು. ನಮ್ಮ ನಾಡಿನ ಹಲವೆಡೆ ರಾಮನ ಪಾದಸ್ಪರ್ಶದ ಕುರಿತು ಕತೆಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ಇವು ಪ್ರಸ್ತಾಪಗೊಳ್ಳದೆ ಇದ್ದರೂ, ಜನಪದದೊಳಗೆ ಇವು ಬೆರೆತಿವೆ…