Home ಧಾರ್ಮಿಕ ಕಾರ್ಯಕ್ರಮ ರಾಜಾಂಗಣ: ವಸಂತ ಧಾರ್ಮಿಕ ಶಿಬಿರ ಉದ್ಘಾಟನೆ

ರಾಜಾಂಗಣ: ವಸಂತ ಧಾರ್ಮಿಕ ಶಿಬಿರ ಉದ್ಘಾಟನೆ

1329
0
SHARE

ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಂದ ಪ್ರತಿ ವರ್ಷ ಪಲಿಮಾರು ಮಠದಲ್ಲಿ ನಡೆಯುವ ವಸಂತ ಧಾರ್ಮಿಕ ಶಿಬಿರದ ಉದ್ಘಾಟನೆ ನಡೆಯಿತು.

ಶ್ರೀಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ, ಯಾವುದು ಕಾಣುವುದಿಲ್ಲವೋ ಅದು ಇಲ್ಲ ಎನ್ನಲು ಸಾಧ್ಯವಿಲ್ಲ, ಅದನ್ನು ಕಾಣಬೇಕಾದರೆ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು. ಕಲಿಕೆ ಎನ್ನುವುದು ಒಂದೆರಡು ವರ್ಷ ಅಲ್ಲ, ಜೀವನ ಪರ್ಯಂತ ಇರುತ್ತದೆ. “ಭಗವಂತನು ನಮ್ಮನ್ನು ರಕ್ಷಣೆ ಮಾಡುತ್ತಾನೆ’ ಎನ್ನುವ ನಂಬಿಕೆಯಿಂದ ಶಿಬಿರದಲ್ಲಿ ಭಾಗವಹಿಸಿದರೆ ಯಶಸ್ಸು ಲಭಿಸುತ್ತದೆ ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಇಪ್ಪತ್ತೂಂದು ವರ್ಷಗಳಿಂದ ಈ ಶಿಬಿರವು ನಡೆಯುತ್ತಿದೆ. ನಮ್ಮ ಧರ್ಮಾಚರಣೆಯ ಬಗ್ಗೆ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಕಲಿಸಿದರೆ ಮುಂದಿನ ಪೀಳಿಗೆಗೆ ಸಂಪ್ರದಾಯ, ಆಚರಣೆಗಳು ಉಳಿಯುತ್ತವೆ. ಧರ್ಮಾಚರಣೆಯಿಂದ ಸಂಸ್ಕೃತಿ ಉಳಿಸಿದರೆ, ದೇಶಕ್ಕೆ ಸುಭಿಕ್ಷೆಯಾಗಲಿದೆ ಎಂದು ಅನುಗ್ರಹ ಸಂದೇಶ ನೀಡಿದರು. ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here