Home ಧಾರ್ಮಿಕ ಸುದ್ದಿ ರಾಯಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ: ಜಾತ್ರೆ ಸಂಪನ್ನ

ರಾಯಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ: ಜಾತ್ರೆ ಸಂಪನ್ನ

422
0
SHARE

ಪುಂಜಾಲಕಟ್ಟೆ : ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಡಿ. ರಾಮಚಂದ್ರ ಭಟ್‌, ಅರ್ಚಕ ಡಿ. ಹರೀಶ್‌ ಭಟ್‌ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ. 19ರಂದು ಸಂಪನ್ನಗೊಂಡಿತು.

ತುಲಾಭಾರ ಸೇವೆ
ಬೆಳಗ್ಗೆ ಪ್ರಾರ್ಥನೆ, ಕವಾಟ ಉದ್ಘಾಟನೆ, ತುಲಾಭಾರ ಸೇವೆಗಳು, ಮಹಾ ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಹರಿ ಕಥಾ ಕಾಲಕ್ಷೇಪ, ಅವಭೃಥ ಸ್ನಾನ, ರಾತ್ರಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ದೈವಗಳಿಗೆ ನೇಮ, ಭಂಡಾರ ನಿರ್ಗಮನ ನಡೆಯಿತು.

ಭಜನ ಮಂಡಳಿ ಅಧ್ಯಕ್ಷ ದಿನೇಶ್‌ ಭಟ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ದರ್ಬೆ, ಆಡಳಿತ ಮಂಡಳಿ ಸದಸ್ಯರಾದ ಸೋಮಪ್ಪ ಮಡಿವಾಳ ಎಂ.ಕೆ., ವೆಂಕಪ್ಪ ಮಲೆತ್ತಾಯ ರಾಮೇರಿ, ರಾಮಸುಂದರ ಗೌಡ ಗೋಳಿತ್ತಬೆಟ್ಟು, ಪ್ರೇಮಾ ರವೀಂದ್ರ ಸಪಲ್ಯ ರಾಯಿ, ನಾರಾಯಣ ಗೌಡ ಮಿಯಾಲು, ಪ್ರೇಮಾ ರಮೇಶ ಪೂಜಾರಿ ಬಜಿಲೋಡಿ, ಸತೀಶ್‌ ಪೂಜಾರಿ ಕಾರಂಬಡೆ, ಮುಡ್ರಾಯಿಬೀಡು, ಪಡ್ರಾಯಿಗುತ್ತು ಮನೆಯವರು, ಮತ್ತಿತರರು ಭಾಗವಹಿಸಿದ್ದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here