ಹೊಸಬೆಟ್ಟು: ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ಮೇ 26ರಂದು ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ರವಿವಾರ ಉಗ್ರಾಣ ಮುಹೂರ್ತ ನೆರವೇರಿತು.
ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ಉದ್ಘಾ ಟಿಸಿ ಶುಭ ಹಾರೈಸಿದರು. ಶ್ರೀಕೃಷ್ಣ , ಆಂಜ ನೇಯ ಸಹಿತ ದೇವರಿಗೆ, ರಾಯರಿಗೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕೆಂದರು.
ವೇ| ಮೂ| ಕಗ್ಗಿ ಗೋಪಾಲಕೃಷ್ಣ ಆಚಾರ್ಯ, ವೇ| ಮೂ| ಶ್ರೀನಿವಾಸ ಆಚಾ ರ್ಯ, ಸುಧಿಧೀರ್ ಶ್ರೀಯಾನ್ ಗುಡ್ಡೆಕೊಪ್ಲ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು, ಅಧ್ಯಕ್ಷ ವಿಶ್ವೇಶ್ವರ ಬದವಿದೆ, ಕಾರ್ಯಾಧ್ಯಕ್ಷ ಆನಂದ್ ಬಿ.ಎಚ್., ಕೋಶಾಧಿಕಾರಿ ರಾಘವೇಂದ್ರ ಎಚ್.ವಿ., ಕಾರ್ಯದರ್ಶಿ ಮೋನಪ್ಪ ಗೌಡ ಬಂಟ್ವಾಳ, ಕಲಾವತಿ, ಸಮಿತಿಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಮಠದಲ್ಲಿ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ವಾಯುಸ್ತುತಿ ಪುರಶ್ಚರಣ ಹೋಮ, ಆಂಜನೇಯ ದೇವರಿಗೆ ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ ನೆರವೇರಿತು.