Home ಧಾರ್ಮಿಕ ಸುದ್ದಿ ಕೋಟಿ ಚೆನ್ನಯರು ಆದರ್ಶವಾಗಲಿ: ಪೂಜಾರಿ

ಕೋಟಿ ಚೆನ್ನಯರು ಆದರ್ಶವಾಗಲಿ: ಪೂಜಾರಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ - ಧಾರ್ಮಿಕ ಸಭೆ

118
0
SHARE

ಪುತ್ತೂರು: ಕೋಟಿ ಚೆನ್ನಯ ನಮಗೆ ಆದರ್ಶ ಆಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಪ್ರೇರಣೆಯಾಗಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಬಿ. ಜನಾರ್ದನ ಪೂಜಾರಿ ಅವರು ಹೇಳಿದರು.

ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಾರೋಗ್ಯದ ಕಾರಣ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ತೆರಳಿದರು.

ಕೇರಳ ಶಿವಗಿರಿ ಶ್ರೀ ಸತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಮಾತ್ಮನ ಸಂಕಲ್ಪದಿಂದ ತಾಯಿಯ ಊರು ಅಭಿವೃದ್ಧಿಯಾಗಿದೆ. ನಾರಾಯಣ ಗುರುಗಳ ಸಂದೇಶ ಇಲ್ಲಿ ಅನುಷ್ಠಾನ ಆಗಿದೆ. ಈ ಊರಿನಲ್ಲಿ ಆಯುರ್ವೇದ ಕಾಲೇಜು ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಾಲಯದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಶುಭಾಶಂಸನೆಗೈದರು.

ಒಗ್ಗಟ್ಟಿನಿಂದ ಅಭಿವೃದ್ಧಿ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕೋಟಿ-ಚೆನ್ನಯ ಅಧ್ಯಯನ ಪ್ರತಿಷ್ಠಾನವನ್ನು ಮೊದಲು ಉಡುಪಿಯಲ್ಲಿ ಮಾಡಿದ್ದೆವು. ಅನಂತರ ಥೀಂ ಪಾರ್ಕ್‌ ಕಾರ್ಕಳದಲ್ಲಿ ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದಿತ್ತು. ಕೋಟಿ-ಚೆನ್ನಯ ಕ್ಷೇತ್ರ ಅಭಿವೃದ್ಧಿಗೆ 5 ಕೋಟಿ ರೂ., ಅಧ್ಯಯನ ಪೀಠಕ್ಕೆ 2 ಕೋಟಿ ರೂ. ಸಿದ್ದರಾಮಯ್ಯ ನೀಡಿದ್ದರು. ಗೆಜ್ಜೆಗಿರಿಯಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ ಆಗಿದೆ ಎಂದರು.

ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಮುಖರಾದ ಶೈಲೇಂದ್ರ ಸುವರ್ಣ, ಸೋಮನಾಥ ಬಂಗೇರ, ಉದಯ ಕುಮಾರ್‌ ಕೋಲಾಡಿ, ಕೇಶವ ಪೂಜಾರಿ ಬೆದ್ರಾಳ, ನಿತ್ಯಾನಂದ ಕೋಟ್ಯಾನ್‌, ನಾರಾಯಣ ಪೂಜಾರಿ ಕುರಿಕ್ಕಾರ, ಉದಯ ಪೂಜಾರಿ ಬಲ್ಲಾಳ್‌ಬಾಗ್‌, ಶೇಖರ ಪೂಜಾರಿ, ಪ್ರವೀಣ್‌ ಮೆಲ್ಕಾರ್‌, ಗೌರೀಶ್‌, ಪದ್ಮನಾಭ ಸುವರ್ಣ, ಅನಿತಾ ಹೇಮನಾಥ ಶೆಟ್ಟಿ, ರಾಧಾಕೃಷ್ಣ ಬೋರ್ಕರ್‌, ವೇದಕುಮಾರ್‌, ಪದ್ಮರಾಜ್‌, ವೇಣುಗೋಪಾಲ್‌ ಭಟ್‌, ಎಸ್‌.ಕೆ. ಪೂಜಾರಿ, ಡಾ| ಸಿ.ಕೆ. ಅಂಚನ್‌, ಕೃಷ್ಣಪ್ಪ ಪೂಜಾರಿ, ಲೀಲಾಕ್ಷ ಕರ್ಕೇರ, ರಘು ಸಿ. ಪೂಜಾರಿ, ರೋಹಿತ್‌ ಸನಿಲ್‌, ಸಂಜೀವ ರೈ, ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಗಣೇಶ್‌ ಬಂಗೇರ, ಉದಯ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಕೃತಿ ಬಿಡುಗಡೆ
ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಬರೆದಿರುವ ಗೆಜ್ಜೆಗಿರಿ ಹೆಜ್ಜೆ ಗುರುತು ಕೃತಿಯನ್ನು ತಂತ್ರಿ ಲೋಕೇಶ್‌ ಶಾಂತಿ ಬಿಡುಗಡೆಗೊಳಿಸಿದರು.

ಗೌರವಾರ್ಪಣೆ
ಕ್ಷೇತ್ರದ ತಂತ್ರಿ ಲೋಕೇಶ್‌ ಶಾಂತಿ, ತಾಂತ್ರಿಕ ವಿನ್ಯಾಸಗಾರ ಸಂತೋಷ್‌ ಕುಮಾರ್‌ ಕೊಟ್ಟಿಂಜ, ದಾರುಬಿಂಬ ರಚನೆಕಾರ ರಮೇಶ್‌ ಪೆರುವಾಯಿ, ಸೆಮಿನಾ ಎರೇಂಜರ್ನ ಸಾವಿತ್ರಿ ನಾರಾಯಣ ಪೂಜಾರಿ ಅವರನ್ನು ಗೌರವಿಸಲಾಯಿತು. ರವಿ ಪೂಜಾರಿ ಚಿಲಿಂಬಿ ಸ್ವಾಗತಿಸಿದರು. ದಿನೇಶ ಸುವರ್ಣ ರಾಯಿ, ಪ್ರಜ್ಞಾ ನಿರೂಪಿಸಿದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here