ನಗರ . 16: 800 ವರ್ಷಗಳ ಪೌರಾಣಿಕ ಹಿನ್ನೆಲೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮಹಾರಥೋತ್ಸವ ಬುಧವಾರ ನಡೆಯಲಿದೆ. ಮಹಾತ್ಮರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವನ್ನು ತಮ್ಮ ಸಂಪುಟದಲ್ಲಿರಿಸಿಕೊಂಡು ದಕ್ಷಿಣ ಪಥದಲ್ಲಿ ಸಂಚರಿಸುತ್ತಾ ಪುತ್ತೂರಿಗೆ ಬಂದ ಸಂದರ್ಭದಲ್ಲಿ ಅರಿಯದೆ ಮರದ ನೆರಳಿನಲ್ಲಿರಿಸಿ ಪೂಜೆ ಮಾಡಿದರು. ಆಮೇಲೆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಸ್ವಯಂಭೂ ಆಯಿತು. ಅರಸ ಬಂಗರಸನು ಲಿಂಗವನ್ನು ನೆಲದಿಂದ ಮೇಲೆತ್ತಲು ಪ್ರಯತ್ನಿಸಿದ. ಆನೆಯ ಸೊಂಡಿಲಿನಿಂದ ಎಳೆಸಿದಾಗ ದೈವೀಗುಣವುಳ್ಳ ಲಿಂಗವು ಮಹಾಲಿಂಗದ ರೂಪ ತಾಳಿದಾಗ ಗಜರಾಜನ ದೇಹ ಛಿದ್ರವಾಗಿ ಚದುರಿಹೋಯಿತು. ಬಳಿಕ ಬಂಗರಾಜನು ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ. ಕೆತ್ತನೆಯ ಆಕರ್ಷಣೆ ಪುನರ್ ನಿರ್ಮಾಣಗೊಂಡು 2013ರಲ್ಲಿ ವೈಭವದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಹೊರಾಂಗಣದ ಕೆಳ
ಭಾಗದಲ್ಲಿ ಧರ್ಮದ ಸಂಕೇತವಾಗಿ 192 ನಂದಿಗಳನ್ನೂ, ಮೇಲ್ಭಾಗದಲ್ಲಿ ಶೌರ್ಯದ ಸಂಕೇತವಾಗಿ 108 ಸಿಂಹವನ್ನು ಶಿಲೆಯಲ್ಲಿ ಕೆತ್ತಲಾಗಿದೆ. ಸ್ಥಳ ಪುರಾಣ ಹಾಗೂ ಶಿವ ಪುರಾಣದ ವರ್ಣನೆಯನ್ನು ಕಾಷ್ಠಶಿಲ್ಪದಲ್ಲಿ ಮಾಡಲಾಗಿದೆ. ಒಂದು ಕರಮಾನಕ್ಕಿಂತ ಕಡಿಮೆ ದೀರ್ಘವಿದ್ದು ಕೇವಲ ಶಿವ ಮತ್ತು ವೈಷ್ಣವ ಅಂಶ ಹೊಂದಿರುವುದು ಅಲ್ಪ ಲಿಂಗ ಕರಮಾನಕ್ಕಿಂತ ಹೆಚ್ಚಿದ್ದು 3 ಅಂಶ ಬುಡದಲ್ಲಿ ಚತುರಾಶ್ರ, ಬ್ರಹ್ಮಾಂಶ ಮಧ್ಯದಲ್ಲಿ ಅಷ್ಟ ವೈಷ್ಣವ ಮೇಲೆ ವೃತ್ತವಾಗಿ ಈಶ್ವರಾಂಶ ಹೊಂದಿರುವುದು ಮಹಾಲಿಂಗ. “ಸ್ವಯಂ ಭೂ’ ಲಕ್ಷಣಗಳಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವಾಗ ಅನುಸರಿಸುವ “ಪಂಜರ’ ಪದ್ಧತಿಯನ್ನು (ಶ್ರೀ ಕ್ಷೇತ್ರ ಧರ್ಮಸ್ಥಳದ ಎರಡು ಗರ್ಭಗೃಹಗಳು ಬಪ್ಪನಾಡು, ಎಲ್ಲೂರು, ನಳೀಲು, ವಳಲಂಬೆಯಲ್ಲಿರುವಂತೆ)ಅಳವಡಿಸಲಾಗಿದೆ.
ಮಹಾಲಿಂಗೇಶ್ವರ ದೇವಾಲಯವು ಮಹಾಪ್ರಾಸಾದವಾಗಿದ್ದು ದ್ವಿತಲವನ್ನು ಹೊಂದಿದೆ. ಆಕಾರದಲ್ಲಿ ಗಜಪೃಷ್ಠ ಪ್ರಾಸಾದವಾಗಿದೆ. ಪ್ರಾಸಾದವು ಮೂರು ಗೋಡೆ ಹಾಗೂ ದೀಪದಳಿಯನ್ನು ಹೊಂದಿದ್ದು ಷಡಂಗಗಳಿಂದ ಕೂಡಿದೆ. ಮೂರು ಭಿತ್ತಿಗಳಲ್ಲಿ ಸುಂದರವಾದ ಕೆತ್ತನೆಗಳನ್ನು ರಚಿಸಲಾಗಿದೆ. ಬ್ರಹ್ಮರಥ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತ ಮುತ್ತಪ್ಪ ರೈ 2010ರಲ್ಲಿ ಕಲಾತ್ಮಕ ಕೆತ್ತನೆಗಳಿರುವ 71 ಅಡಿ ಎತ್ತರದ 20 ಅಡಿ ಅಗಲದ ಬ್ರಹ್ಮರಥವನ್ನು ನೀಡಿದ್ದಾರೆ. ಹೊಯ್ಸಳ ಶೈಲಿ ಕಾಷ್ಠ ಶಿಲ್ಪದಲ್ಲಿರುವ ಈ ರಥವನ್ನು ನಿರ್ಮಿಸಲು ಎರಡು ವರ್ಷ ತಗುಲಿದ್ದು, 7,200 ಮಾನವ ದಿನಗಳು ಬಳಕೆಯಾಗಿವೆ ಅನಂತರ ರಥಬೀದಿ ರಚಿಸಲಾಗಿದೆ.
ಮುತ್ತು ಬೆಳೆದ ಪುಷ್ಕರಿಣಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಕೆರೆ ಮುತ್ತು ಬೆಳೆದ ಕೆರೆ ಎಂಬ ಪ್ರತೀತಿ. ಕೆರೆಯನ್ನು ಎಷ್ಟು ಆಳವಾಗಿ ತೋಡಿದರೂ ನೀರು
ಸಿಗದಾಗ ರಾಜನು ಕೆರೆಯ ಮಧ್ಯಭಾಗದಲ್ಲಿ ವರುಣ ದೇವರ ಕಲ್ಲಿನ ವಿಗ್ರಹ ಸ್ಥಾಪಿಸಿ ವರುಣ ಪೂಜೆ ಹಾಗೂ ಋತ್ವಿಜರಿಗೆ ಕೆರೆಯ ತಳ ಭಾಗದಲ್ಲಿ ಅನ್ನಸಂತರ್ಪಣೆ ಮಾಡಿಸಿದ.
ಭೋಜನದ ಕೊನೆಯ ಹಂತದಲ್ಲಿ ಕೆರೆಯಲ್ಲಿ ನೀರು ಉಕ್ಕಿ ಬಂತು. ಊಟ ಮಾಡುತ್ತಿದ್ದ ಋತ್ವಿಜರು ಎಲೆ ಅಲ್ಲೇ ಬಿಟ್ಟು ಓಡಿದ್ದು, ಅನ್ನದ ಅಗಳುಗಳು ಮುತ್ತುಗಳಾದವು. ಎಲೆಯೇ
ಅದರ ಚಿಪ್ಪಾಯಿತು ಎಂಬ ಪ್ರತೀತಿ. ಸಂಪ್ರದಾಯದಂತೆ ಎ. 1ರಂದು ಗೊನೆ ಮುಹೂರ್ತ ನಡೆದು ಎ. 10ರಂದು ಧ್ವಜಾರೋಹಣ, ಎ. 17ರಂದು ಬ್ರಹ್ಮರಥೋತ್ಸವ, ಎ. 18ರಂದು ವೀರಮಂಗಲ ಕುಮಾರಧಾರ ನದಿಯಲ್ಲಿ ಅವಭೃಥ ಸ್ನಾನ, ಎ. 19ರಂದು ಮುಂಜಾನೆ ಧ್ವಜಾವರೋಹಣ ನಡೆಯುತ್ತದೆ. ಶ್ರೀ ಭಕ್ತ ಮನಸ್ಸುಗಳು ನಿತ್ಯ ನೆನೆಯುವ ಸ್ವಯಂಭೂ ಮಹಾಲಿಂಗೇಶ್ವರ
· ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಗಜಪೃಷ್ಟ ಆಯದ 12ನೇ ಶತಮಾನದ ವಾಸ್ತು ಶೈಲಿಯ ದೇವಾಲಯ
· ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥ ರಾಜ್ಯದಲ್ಲಿಯೇ ಅತೀ ಎತ್ತರವಾಗಿದೆ.
· 1.25 ಕೋಟಿ ರೂ. ವೆಚ್ಚದಲ್ಲಿ ಭಕ್ತರ ಸಹಕಾರದೊಂದಿಗೆ ನಿರ್ಮಿಸಲಾದ ತೌಳವ -ದ್ರಾವಿಡ ಶೈಲಿಯ ರಾಜಗೋಪುರ
· 1.50 ಕೋಟಿ ರೂ. ವೆಚ್ಚದಲ್ಲಿ ಸ್ವರ್ಣ ಕವಚದ ಧ್ವಜಸ್ತಂಭ
· ದಶ ದಿಕ್ಕುಗಳಿಗೆ ದೇವರ ಪೇಟೆ ಸವಾರಿ ಉತ್ಸವ ಮತ್ತು ಕಟ್ಟೆಪೂಜೆ
· 13 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತ ಸವಾರಿ.
· ಬಲಾಡು ದಂಡನಾಯಕ ಉಳ್ಳಾಳ್ತಿ ದೈವಗಳ ಅಪ್ಪಣೆಯಾಗದೆ ಬಟ್ಟಲು ಕಾಣಿಕೆ ಸಮರ್ಪಣೆಯಿಲ್ಲ.
· ಅವಭೃಥ ಸವಾರಿಯಂದು ಮಾತ್ರ ತುಲಾಭಾರ ಸೇವೆ.
· ಮಕರ ಸಂಕ್ರಮಣದ ದಿನ ದೇವರ ಉತ್ಸವ ಮೂರ್ತಿಗೆ ವಿಜಯದ ಸಂಕೇತವಾಗಿ ಕನಕಾಭಿಷೇಕ ನಡೆಯುತ್ತದೆ.
ಜಾತ್ರೆ ಅಂಗವಾಗಿ ಬಲಿ ಉತ್ಸವ ನಡೆಯಿತು.
ದೇವರು ಸಕಲ ಗೌರವಗಳೊಂದಿಗೆ ಪೇಟೆಯ ವಿವಿಧ ಭಾಗಗಳಿಗೆ ಸವಾರಿ ತೆರಳಿ ಸಾವಿರಾರು ಕಟ್ಟೆಪೂಜೆ, ಭಕ್ತರು ಅರ್ಪಿಸಿದ ಹೂವು, ಹಣ್ಣು, ಆರತಿ ಸ್ವೀಕರಿಸುವುದು ವಿಶೇಷ.
ರಾಜಗಾಂಭೀರ್ಯದ ಸೊಗಸು ಪುತ್ತೂರು ಒಡೆಯನ ದೇವಾಲಯಕ್ಕೆ ತೌಳವ-ದ್ರಾವಿಡ ಶೈಲಿಯ ರಾಜಗೋಪುರ ಸಮರ್ಪಣೆಯಾಗಿದೆ. 19 ಅಡಿ ಸುತ್ತಳತೆ, 47 ಅಡಿ ಎತ್ತರದ ರಾಜಗೋಪುರವನ್ನು 120 ಮೂರ್ತಿಗಳಿಂದ ಅಲಂಕರಿಸಲಾಗಿದೆ.
ತುತ್ತ ತುದಿಯಲ್ಲಿ ಪಂಚಕಲಶಗಳು ಶೋಭಾಯಮಾನವಾದರೆ ಇಕ್ಕೆಲಗಳಲ್ಲಿ ಶೋಭಾನೆ ಮಂಟಪವಿದೆ. ಈ ಬಾರಿ ಹೊಸದು ದೇವಾಲಯಕ್ಕೆ ಮಾ. 22ರಂದು ನೂತನ ಸ್ವರ್ಣಕವಚದ ಧ್ವಜಸ್ತಂಭ ಹಾಗೂ ಹೂತೇರು ಸಮರ್ಪಿಸಲಾಗಿದೆ. ಈ ಬಾರಿ ಜಾತ್ರೆಗೆ ಇವು ಮೆರುಗು ತುಂಬಿವೆ. ಭಕ್ತರ ಸಹಕಾರದಲ್ಲಿ 4 ಕೆ.ಜಿ. ಚಿನ್ನ ಬಳಸಿ 62 ಅಡಿ ಎತ್ತರದ ಧ್ವಜಸ್ತಂಭಕ್ಕೆ ಸ್ವರ್ಣ ಕವಚದ ಹೊದಿಕೆ ಅಳವಡಿಸಲಾಗಿದೆ. ಹೂತೇರು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿ¨
ಪುತ್ತೂರು ಬೆಡಿ
ಪುತ್ತೂರು ಜಾತ್ರೆಯ ಸಂದರ್ಭ ಎ. 17ರಂದು ನಡೆಯುವ ಸುಡುಮದ್ದು ಪ್ರದರ್ಶನ “ಪುತ್ತೂರು ಬೆಡಿ’ ಎಂದೇ ಪ್ರಸಿದ್ಧ ಪಡೆದಿದೆ. ಇದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈಗ ಎ. 16ರಂದು ಬಲಾ°ಡು ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪುತ್ತೂರು ಜಾತ್ರೆಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಸಣ್ಣ ಬೆಡಿ ಎನ್ನುತ್ತಾರೆ. ಎ. 17ರಂದು ಬ್ರಹ್ಮರಥಾರೋಹಣವಾದ ಬಳಿಕ ದೊಡ್ಡ ಬೆಡಿ ನಡೆಯುತ್ತದೆ.
ದೇವಾಲಯದ ವಿಶೇಷತೆ
ಸ್ವಯಂಭೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಸುಬ್ರಹ್ಮಣ್ಯ ಗುಡಿ, ಗಣಪತಿ ಗುಡಿ, ಶಾಸ್ತಾವು ಗುಡಿ, ದೇವಿ ಗುಡಿ, ದೈವಗಳ ಗುಡಿಗಳಿವೆ. ಒಳಾಂಗಣದ ದಕ್ಷಿಣದಲ್ಲಿ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು, ಸುತ್ತಲೂ ಅಷ್ಟದಿಕಾ³ಲಕರನ್ನು ಸ್ಥಾಪಿಸಲಾಗಿದೆ. ಈಶಾನ್ಯದಲ್ಲಿ ಚೆಂಡೇಶ್ವರ, ಕ್ಷೇತ್ರಪಾಲಕನನ್ನು ಹಾಗೂ ನಂದಿಯ ಹಿಂಭಾಗದಲ್ಲಿ ಬಲಿಕಲ್ಲು ಸ್ಥಾಪಿಸಲಾಗಿದೆ. ಒಳಾಂಗಣದ ದಕ್ಷಿಣದಲ್ಲಿ ಬ್ರಾಹ್ಮಿà, ಮಾಹೇಶ್ವರಿ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ ಎಂಬ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಚಂದ್ರಮಂಡಲ ರಥೋತ್ಸವ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಸೌರಯುಗಾದಿ ವಿಷುವಿನ ಅಂಗವಾಗಿ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ದೇವರ ಚಂದ್ರಮಂಡಲ ಉತ್ಸವ ನಡೆದು ಅನಂತರ ಶ್ರೀ ದೇವರ ಪೇಟೆ ಸವಾರಿ ನಡೆಯಿತು.
ಉಳ್ಳಾಲ್ತಿ ಭಂಡಾರ ಆಗಮನ
ಮಂಗಳವಾರ ರಾತ್ರಿ ದೇವಾಲಯದಲ್ಲಿ ಉತ್ಸವ ಬಲಿ ನಡೆಯಿತು. ಬಲಾ°ಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ಶ್ರೀ ದೇವಾಲಯಕ್ಕೆ ಆಗಮಿಸಿತು. ಬಳಿಕ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವ ನಡೆಯಿತು. ಬಲಾ°ಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸಿದ ಸಂದರ್ಭದಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವು ಸಮರ್ಪಣೆ ಸೇವೆ ನಡೆಸಿದರು. ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲಾ°ಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸಿದರು.
ಇವು ವಿಶೇಷತೆ
· ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಗಜಪೃಷ್ಟ ಆಯದ 12ನೇ ಶತಮಾನದ ವಾಸ್ತು ಶೈಲಿಯ ದೇವಾಲಯ
· ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥ ರಾಜ್ಯದಲ್ಲಿಯೇ ಅತೀ ಎತ್ತರವಾಗಿದೆ.
· 1.25 ಕೋಟಿ ರೂ. ವೆಚ್ಚದಲ್ಲಿ ಭಕ್ತರ ಸಹಕಾರದೊಂದಿಗೆ ನಿರ್ಮಿಸಲಾದ ತೌಳವ
-ದ್ರಾವಿಡ ಶೈಲಿಯ ರಾಜಗೋಪುರ
· 1.50 ಕೋಟಿ ರೂ. ವೆಚ್ಚದಲ್ಲಿ ಸ್ವರ್ಣ ಕವಚದ ಧ್ವಜಸ್ತಂಭ
· ದಶ ದಿಕ್ಕುಗಳಿಗೆ ದೇವರ ಪೇಟೆ ಸವಾರಿ ಉತ್ಸವ ಮತ್ತು ಕಟ್ಟೆಪೂಜೆ
· 13 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತ ಸವಾರಿ.
· ಬಲಾ°ಡು ದಂಡನಾಯಕ ಉಳ್ಳಾಳ್ತಿ ದೈವಗಳ ಅಪ್ಪಣೆಯಾಗದೆ ಬಟ್ಟಲು ಕಾಣಿಕೆ ಸಮರ್ಪಣೆಯಿಲ್ಲ.
· ಅವಭೃಥ ಸವಾರಿಯಂದು ಮಾತ್ರ ತುಲಾಭಾರ ಸೇವೆ.
· ಮಕರ ಸಂಕ್ರಮಣದ ದಿನ ದೇವರ ಉತ್ಸವ ಮೂರ್ತಿಗೆ ವಿಜಯದ ಸಂಕೇತವಾಗಿ ಕನಕಾಭಿಷೇಕ ನಡೆಯುತ್ತದೆ.
ವಿಶೇಷ ವರದಿ