ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಕರ ಸಂಕ್ರಮಣದ ದಿನ ರಾತ್ರಿ ಶ್ರೀ ಉಳ್ಳಾಳ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನಡೆಯಿತು.
ರಾತ್ರಿ ಪೂಜೆಯ ಬಳಿಕ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಆಡಳಿತ ಮೊಕ್ತೇಸರ ಎನ್. ಸುಧಾಕರ ಶೆಟ್ಟಿ ಕನಕಾಭಿಷೇಕ ನೆರವೇರಿಸಿದರು. ಹರಿವಾಣದಲ್ಲಿ ಹೊದ್ಲು, ಅಡಿಕೆ, ವೀಳ್ಯದೆಲೆ, ಕರಿಮೆಣಸು ಮೊದಲಾದ ಸುವಸ್ತುಗಳು, ಚಿನ್ನ, ಬೆಳ್ಳಿ, ನಾಣ್ಯಗಳನ್ನು ಉತ್ಸವ ಮೂರ್ತಿಗೆ ಚಿಮ್ಮಿಸಿ, ಅಭಿಷೇಕ ಮಾಡಲಾಯಿತು.
ಅರ್ಚಕ ವಿ.ಎಸ್. ಭಟ್ ವೈದಿಕ ವಿಧಿ-ವಿಧಾನ ನೆರವೇರಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಯು.ಪಿ. ರಾಮಕೃಷ್ಣ, ಸಂಜೀವ ನಾಯಕ್ ಕಲ್ಲೇಗ, ಜಾನು ನಾಯ್ಕ, ಕರುಣಾಕರ ರೈ, ನಯನಾ ರೈ, ರೋಹಿಣಿ ಆಚಾರ್ಯ, ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಹಾಗೂ ಭಕ್ತರು ಪಾಲ್ಗೊಂಡರು.