ಪುತ್ತೂರು : ಸೌರಯುಗಾದಿ ವಿಷುವಿನ ಅಂಗವಾಗಿ ರವಿವಾರ ಮಹ ತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲ ಯದ ಒಳಾಂಗಣದಲ್ಲಿ ವಿಷುಕಣಿ ಉತ್ಸವ ಬಲಿ ನಡೆಯಿತು.
ಪ್ರಾತಃಕಾಲ ಶ್ರೀ ದೇವರ ಗರ್ಭಗುಡಿಯ ನಡೆ ತೆರೆದು ವಿಷುಕಣಿ ದರ್ಶನದ ಬಳಿಕ ಭಕ್ತರು ಶ್ರೀ ದೇವರನ್ನು ಭೇಟಿಮಾಡಿ ವಿಷು ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಅನಂತರ ದೇವಾಲಯದ ಒಳಾಂಗಣದಲ್ಲಿ ವಿಷು ಕಣಿ ಪ್ರಯುಕ್ತ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಸುತ್ತುಗಳ ಆಕರ್ಷಣೆ
ದೇವಾಲಯದಲ್ಲಿ ವಿಶೇಷ ವಾಗಿ ಮೊದಲಿಗೆ ತಂತ್ರ ಸುತ್ತು, ಅನಂತರ ಉಡಿಕೆ ಸುತ್ತು,
ಚೆಂಡೆ ಸುತ್ತಿನ ಬಳಿಕ ವಸಂತ ಕಟ್ಟೆ ಪೂಜೆ, ಸೇವೆಯ ವಾದ್ಯ ಸುತ್ತುಗಳು, ಶಂಖ, ಜಾಗಟೆ ಸುತ್ತು, ಬ್ಯಾಂಡ್ ವಾಲಗ ಸುತ್ತು ಮತ್ತು ಸರ್ವ ವಾದ್ಯ ಸುತ್ತು ನಡೆಯಿತು. ಬಳಿಕ ಶ್ರೀ ದೇವರು ಒಳಗಾಗಿ ಮಹಾ ಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಮಧ್ಯಾಹ್ನ ವಿಷು ಕಣಿಯ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲ ಯದಲ್ಲಿ ಸೌರ ಯುಗಾದಿ ವಿಷುಕಣಿಯು ಜಾತ್ರೆ ಸಂದರ್ಭದಲ್ಲಿಯೇ ಬರುತ್ತದೆ.