Home ಧಾರ್ಮಿಕ ಕಾರ್ಯಕ್ರಮ ವರುಣನ ಕೃಪೆಗೆ ಪ್ರಾರ್ಥಿಸಿ ಸೀಯಾಳಾಭಿಷೇಕ

ವರುಣನ ಕೃಪೆಗೆ ಪ್ರಾರ್ಥಿಸಿ ಸೀಯಾಳಾಭಿಷೇಕ

ಮಹಾಲಿಂಗೇಶ್ವರ ದೇವರಿಗೆ ಸಾವಿರಾರು ಭಕ್ತರಿಂದ ಸೀಯಾಳ ಸಮರ್ಪಣೆ

689
0
SHARE

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವರುಣನ ಕೃಪೆಗೆ ಪ್ರಾರ್ಥಿಸಿ ಶನಿವಾರ ಶ್ರೀ ದೇವರಿಗೆ ಸೀಯಾಳಾಭಿಷೇಕ ಸೇವೆಯನ್ನು ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು.

ದೇವರ ನಡೆಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಪುತ್ತೂರು ಸೀಮೆಯಲ್ಲಿ ಶೀಘ್ರ ಮಳೆ ಸುರಿಯುವ ಮೂಲಕ ಇಲ್ಲಿನ ಕೃಷಿ ಸಹಿತ ಸಮೃದ್ಧಿ ಉಂಟಾಗುವಂತೆ ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವೇ| ಮೂ| ವಸಂತ ಕೃಷ್ಣ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ದಂಪತಿ, ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್‌. ಬಾಬು, ಸಮಿತಿಯ ಸದಸ್ಯರಾದ ಜಾನು ನಾಯ್ಕ, ಕಲ್ಲೇಗ ಸಂಜೀವ ನಾಯಕ್‌, ಕರುಣಾಕರ ರೈ, ಯು.ಪಿ. ರಾಮಕೃಷ್ಣ, ನಯನಾ ರೈ, ರೋಹಿಣಿ ಆಚಾರ್ಯ ಸಹಿತ ಭಕ್ತರು ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿಯ ಮನವಿಗೆ ಸ್ಪಂದಿಸಿ ಭಕ್ತರು ತಮ್ಮ ತೋಟಗಳಲ್ಲಿ ಬೆಳೆದ ಸೀಯಾಳಗಳನ್ನು ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಸಮರ್ಪಣೆ ಮಾಡಿದರು.

ಸೀಮೆಯ ಒಡೆಯನಿಗೆ ಸೀಯಾಳಾಭಿಷೇಕ ಸೇವೆ ನೀಡಿದರೆ ಮಳೆ ಆರಂಭವಾಗುತ್ತದೆ ಎಂಬ ನಂಬಿಕೆ ಸೀಮೆಯ ಭಕ್ತರಲ್ಲಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಭಕ್ತರು ಪ್ರಾರ್ಥನೆ ಸಲ್ಲಿಸಿದಾಗ ದೇವಾಲಯದ ಕೆರೆಯಲ್ಲಿ ನೀರು ಉಕ್ಕಿ ಬಂದು ಕೆರೆ ದಂಡೆಯಲ್ಲಿ ನಡೆಯುತ್ತಿದ್ದ ಅನ್ನದಾನದಲ್ಲಿ ಎಲೆಯಲ್ಲಿ ಬಡಿಸಿದ ಅನ್ನದ ಅಗಳುಗಳು ಮುತ್ತುಗಳಾದ ಕತೆ ಪುತ್ತೂರು ಮಹಾಲಿಂಗೇಶ್ವನ ಧಾರ್ಮಿಕ ಚರಿತ್ರೆಯಲ್ಲಿ ಸೇರಿದೆ.

ಒಳಿತು ಮಾಡುವ ದೇವರು
ಜನರು ತಮ್ಮ ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ ಸಂದರ್ಭಗಳಲ್ಲಿ ಒಳಿತನ್ನು ಅನುಗ್ರಹಿಸುವ ದೇವರು ಸೀಮೆಯ ಒಡೆಯ ಮಹಾಲಿಂಗೇಶ್ವರ. ಮಳೆಗಾಗಿ ಪ್ರಾರ್ಥಿಸಿದ ಸಂದರ್ಭದಲ್ಲೂ ದೇವರ ಅನುಗ್ರಹ ಪ್ರಾಪ್ತವಾಗಿದೆ.
– ಎನ್‌. ಸುಧಾಕರ ಶೆಟ್ಟಿ
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here