Home ಧಾರ್ಮಿಕ ಸುದ್ದಿ ಮಹಾಲಿಂಗೇಶ್ವರ: ಪತ್ತನಾಜೆ ಉತ್ಸವ

ಮಹಾಲಿಂಗೇಶ್ವರ: ಪತ್ತನಾಜೆ ಉತ್ಸವ

832
0
SHARE

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ತಡರಾತ್ರಿ ತನಕ ಪತ್ತನಾಜೆ ಉತ್ಸವದ ವಿವಿಧ ವಿಧಾನಗಳು ನಡೆದು ದೇವರು ಒಳಗಾಗುವ ಕಾರ್ಯಕ್ರಮ ನಡೆಯಿತು.

ಸಂಜೆ ದೇವಾಲಯದ ಸುಬ್ರಹ್ಮಣ್ಯ, ಗಣಪತಿ, ಶಾಸ್ತಾವು, ಶ್ರೀ ದೇವಿಯ ಗುಡಿಗಳಲ್ಲಿ ವಿಶೇಷ ಪೂಜೆ ನಡೆಯಿತು. ಅನಂತರ ದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಶ್ರೀ ದೇವರು ಉತ್ಸವವಾಗಿ ಒಳಗಾದ ಬಳಿಕ ದೇವಾಲಯದ ಸುತ್ತು ಗೋಪುರದಲ್ಲಿರುವ ಶ್ರೀ ಉಳ್ಳಾಲ್ತಿ ನಡೆಗೆ ಬಾಗಿಲು ಹಾಕಲಾಯಿತು.

ಅನಂತರ ಭಕ್ತರಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಅವರು ಪತ್ತನಾಜೆ ಪ್ರಸಾದ ವಿತರಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರು, ಸಾವಿರಾರು ಭಕ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here