Home ಧಾರ್ಮಿಕ ಸುದ್ದಿ ದೇವರ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ‘ನಂದಿ’

ದೇವರ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ‘ನಂದಿ’

••ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಹೃದಯಾಘಾತ

1685
0
SHARE

ನಗರ : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಕಾರ್ಯದಲ್ಲಿ ಸೇವೆ ನೀಡಿದ ನಂದಿ ಹೆಸರಿನ ಬಸವ ಗುರುವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.

ಸುಮಾರು 16 ವರ್ಷಗಳ ಹಿಂದೆ ಈ ಬಸವನನ್ನು ಮಹಾಲಿಂಗೇಶ್ವರ ದೇವಾಲ ಯಕ್ಕೆ ತರಲಾಗಿತ್ತು. ಅಲ್ಲಿಂದ ದೇವಾಲಯ ಉತ್ಸವಗಳಲ್ಲಿ ನಿತ್ಯ ಪಾಲ್ಗೊಳ್ಳುತ್ತಿದ್ದ ನಂದಿಗೆ 2-3 ವರ್ಷಗಳಿಂದ ಅನಾರೋಗ್ಯ ಬಾಧಿಸಿತ್ತು. ಆಗಾಗ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಗುರುವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ವಿಧಿ ವಶವಾಗಿದೆ.

ಪೂಜೆಯ ವೇಳೆ ಬರುತ್ತಿದ್ದ
ದೊಡ್ಡ ಗಾತ್ರವನ್ನು ಹೊಂದಿದ್ದರೂ ಸೌಮ್ಯ ಸ್ವಭಾವದ ನಂದಿ ನಿತ್ಯ ಮಧ್ಯಾಹ್ನದ ಪೂಜೆಯ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗಕ್ಕೆ ಬಂದು ವೀಕ್ಷಿಸುವುದು ಭಕ್ತರನ್ನು ಸೆಳೆಯುತ್ತಿತ್ತು. ನಂದಿಯ ಗಾಂಭೀರ್ಯದ ನಡಿಗೆ ಭಕ್ತರಿಗೆ ಪ್ರಿಯವಾಗಿತ್ತು. ಗುರುವಾರ ಮಧ್ಯಾಹ್ನ ಪೂಜೆ ವೇಳೆಯೂ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿ ತೆರಳಿತ್ತು ಎನ್ನುತ್ತಾರೆ ದೇವಾಲಯದ ಸಿಬಂದಿ.

ವಿಶ್ರಾಂತಿಯಲ್ಲಿದ್ದ
ಸುಮಾರು 18 ವರ್ಷದ ಪ್ರಾಯದ ನಂದಿಗೆ ಎರಡು ವರ್ಷಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ಸವಗಳಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿ ನೀಡಲಾಗಿತ್ತು. 2 ವರ್ಷಗಳ ಹಿಂದೆ ಸಜಿಪದಿಂದ ತರಲಾದ ಇನ್ನೊಂದು ಬಸವನನ್ನು ಬಳಸಲಾಗುತ್ತಿತ್ತು. ನಂದಿ ಗುರುವಾರ ರಾತ್ರಿ ದೇವರ ಪೂಜೆಯ ಬಳಿಕ ಹೃದಯಾಘಾತಕ್ಕೊಳಗಾಗಿ ಇಹಲೋಕ ಬಿಟ್ಟು ಶಿವನ ಪಾದ ಸೇರಿದೆ. ದೇವಾಲಯದ ಐತಿಹಾಸಿಕ ದೇವರಮಾರು ಗದ್ದೆಯಲ್ಲಿರುವ ಬಸವ ಮಾಯವಾದ ಜಾಗದಲ್ಲಿ ಸಕಲ ಗೌರವದೊಂದಿಗೆ ನಂದಿಯ ದಫನ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಸಿಬಂದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here