Home ಧಾರ್ಮಿಕ ಸುದ್ದಿ ಪುತ್ತೂರು ನಿಡ್ಪಳ್ಳಿಗುತ್ತು ಗೃಹಪ್ರವೇಶ, ದೈವಗಳ ಪುನಃಪ್ರತಿಷ್ಠೆ, ಪಟ್ಟಾಭಿಷೇಕ, ಧರ್ಮನೇಮ

ಪುತ್ತೂರು ನಿಡ್ಪಳ್ಳಿಗುತ್ತು ಗೃಹಪ್ರವೇಶ, ದೈವಗಳ ಪುನಃಪ್ರತಿಷ್ಠೆ, ಪಟ್ಟಾಭಿಷೇಕ, ಧರ್ಮನೇಮ

1604
0
SHARE

ಮೂಡಬಿದಿರೆ/ ಮಂಗಳೂರು : ಪುತ್ತೂರು ನಿಡ್ಪಳ್ಳಿಯಲ್ಲಿ ಜೀರ್ಣೋದ್ಧಾರಗೊಳಿಸಿದ ನಿಡ್ಪಳ್ಳಿಗುತ್ತಿನ ಗೃಹಪ್ರವೇಶ, ದೈವಗಳ ಪುನಃಪ್ರತಿಷ್ಠೆ, ಪಟ್ಟಾಭಿಷೇಕ, ಧರ್ಮನೇಮ, ಧಾರ್ಮಿಕ ಕಾರ್ಯಕ್ರಮಗಳು ಮಾ. 12ರಿಂದ ಮೊದ ಲ್ಗೊಂಡು 16ರ ವರೆಗೆ ಜರಗಲಿವೆ.

ಮಾ. 13ರಂದು ಪ್ರಾಸಾದ ಶುದ್ಧಿ, ವಾಸ್ತುಹೋಮ, ಬಲಿ, ರಾಕ್ಷೋಘ್ನ ಹೋಮ, ಬಿಂಬ ಪರಿಗ್ರಹ, ಅಧಿವಾಸ ಪ್ರಕ್ರಿಯೆ ನಡೆಯಲಿದೆ. 14ರಂದು ಬೆಳಗ್ಗೆ 6.45ಕ್ಕೆ ಬ್ರಹ್ಮಶ್ರೀ ವೇ| ಮೂ| ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಗೃಹಪ್ರವೇಶ, ಪಿಲಿಭೂತ ಮತ್ತು ಮಲರಾಯ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕ ಹಾಗೂ ನಿಡ್ಪಳ್ಳಿಗುತ್ತು ದಿ| ಕೆ. ಜೀವಂಧರ ಆರಿಗ ಮತ್ತು ವಸಂತಿ ಜೆ. ಆರಿಗ ಅವರ ಪುತ್ರ ಎನ್‌. ಪ್ರವೀಣ ಆರಿಗ ಅವರಿಗೆ ಪಟ್ಟಾಭಿ ಷೇಕ ಕಾರ್ಯಕ್ರಮ ನಡೆಯಲಿದ್ದು, ನಿತ್ಯ ನೈಮಿತ್ತಿಕ ನಿರ್ಣಯಗಳು, ಶ್ರೀ ಭೈರವ ಪದ್ಮಾವತಿ ಆರಾಧನೆಯಾಗಿ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

15ರಂದು ಬೆಳಗ್ಗೆ 7.30ರಿಂದ ಬಾಕುಡೆ ಜಾಲಿನಲ್ಲಿ ಪರ್ವ, ಗುತ್ತಿನ ಮನೆಯಲ್ಲಿ ಮಧ್ಯಾಹ್ನ ಮಾಲ ಕಾರ್ಯ, ಅಪರಾಹ್ನ 4ಕ್ಕೆ ಉಳ್ಳಾಕುಲು ಮಾಡದಲ್ಲಿ ಉಳ್ಳಾಕುಲು ದೈವಗಳು, ಮೂವರು ಪ್ರಧಾನಿಗಳಿಗೆ ಪರ್ವ, ಇಷ್ಟದೇವತಾ ಪರ್ವ, 6ರಿಂದ ಗುತ್ತಿನ ಚಾವಡಿಯಲ್ಲಿ ದುರ್ಗಾಪೂಜೆ, 8ರಿಂದ ಭಂಡಾರ ಇಳಿದು, ಮಹಾ ಅನ್ನ ಸಂತರ್ಪಣೆಯಾಗಿ ಪಿಲಿಭೂತ ದೈವದ ನೇಮ, 16ರಂದು ಸಂಜೆ ಮಲರಾಯ ದೈವದ ನೇಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ 2ರಿಂದ ಜಾಲ ಪಂಜುರ್ಲಿ ದೈವದ ನೇಮ, 4ಕ್ಕೆ ಧೂಮಾವತಿ ದೈವದ ನೇಮ ಜರಗಲಿದೆ ಎಂದು ನಿಡ್ಪಳ್ಳಿಗುತ್ತು ಕುಟುಂಬಸ್ಥರ ಪರವಾಗಿ ಪ್ರಮೋದ ಆರಿಗ ಮತ್ತು ಕೃಷ್ಣಮೋಹನ ಆರಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here