Home ಧಾರ್ಮಿಕ ಸುದ್ದಿ ನಂದನಬಿತ್ತಿಲ್ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯ ಹಸ್ತಾಂತರ

ನಂದನಬಿತ್ತಿಲ್ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯ ಹಸ್ತಾಂತರ

ಗೆಜ್ಜೆಗಿರಿ: ಬೆಳ್ತಂಗಡಿ ಬಿಲ್ಲವ ಸಂಘದ ನಿಯೋಗ ಭೇಟಿ

1707
0
SHARE
ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರಕ್ಕೆ ಬಿಲ್ಲವರ ಸಂಘದಿಂದ ಧನಸಹಾಯವನ್ನು ಹಸ್ತಾಂತರಿಸಲಾಯಿತು

ಪುತ್ತೂರು: ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರಕ್ಕೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಬಿಲ್ಲವ ಸಂಘದ ನಿಯೋಗ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಅವರ ನೇತೃತ್ವದಲ್ಲಿ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಮುಂಬಯಿ ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಎನ್‌.ಟಿ. ಪೂಜಾರಿ ಮತ್ತು ಮುಂಬಯಿ ಉದ್ಯಮಿ ಹರೀಶ್‌ ಅಮೀನ್‌ ನೀಡಿದ 5 ಲಕ್ಷ ರೂ. ಹಾಗೂ ಸೂರಜ್‌ಕುಮಾರ್‌ ಮಂಗಳೂರು ಅವರು ನೀಡಿದ 35 ಸಾವಿರ ರೂ.ಗಳನ್ನು ಕ್ಷೇತ್ರದ ಅಧ್ಯಕ್ಷ ಜಯಂತ್‌ ನಡುಬೈಲು ಹಾಗೂ ಆನುವಂಶಿಕ ಮೊಕ್ತೇಸರ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.

ಬಿಲ್ಲವ ಸಂಘದ ವತಿಯಿಂದ 60 ಲೀ. ಎಳ್ಳೆಣ್ಣೆಯನ್ನು ಕ್ಷೇತ್ರದ ಕೋಡಿ ಮರಕ್ಕೆ ಸಮರ್ಪಿಸಲಾಯಿತು. ನಿಯೋಗವು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೇಯಿ ಬೈದೆತಿ ವನ, ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿತು.

ಬಿಲ್ಲವ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಸುಜಿತಾ ವಿ. ಬಂಗೇರ, ರಾಜಶ್ರೀ ರಮಣ, ನಿತ್ಯಾನಂದ ನಾವರ, ಶೇಖರ ಬಂಗೇರ, ಜಯರಾಮ ಬಂಗೇರ, ಜಯ ವಿಕ್ರಮ, ಕೇಶವತಿ, ವಿನೋದಿನಿ ರಾಮಪ್ಪ, ರಾಕೇಶ್‌ ಮೂಡುಕೋಡಿ, ಸಂತೋಷ ಉಪ್ಪಾರ, ದಿನೇಶ್‌ ಬಯಲು, ನಾರಾಯಣ ಪೂಜಾರಿ ಮಚ್ಚಿನ, ಗೋಪಾಲ ಕೋಲಾಗೆ, ಲಕ್ಷ್ಮಣ ಪೂಜಾರಿ, ಚಂದಪ್ಪ ಪೂಜಾರಿ, ವಿಶ್ವನಾಥ ಕರ್ಕೇರ, ಶುಭಕರ, ರಾಮಣ್ಣ ಪೂಜಾರಿ, ರವಿಕುಮಾರ್‌ ಬರಮೇಲು, ಶಾಂತಾ ಕುವೆಟ್ಟು, ಉಮೇಶ್‌ ಕುವೆಟ್ಟು ಮೊದಲಾದವರಿದ್ದರು. ಕಾರ್ಯದರ್ಶಿ ಸುಧಾಕರ ಪೂಜಾರಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here