Home ಧಾರ್ಮಿಕ ಸುದ್ದಿ ಪುತ್ತೂರು: ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ

ಪುತ್ತೂರು: ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ

581
0
SHARE

ನಗರ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ 53ನೇ ವರ್ಷದ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಗೆ ಶನಿವಾರ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಲ್ಲಿ ಮುಹೂರ್ತ ನೆರವೇರಿಸಲಾಯಿತು. ಬಳಿಕ ಪುತ್ತೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ನೆರವೇರಿಸಲಾಯಿತು.

ಪ್ರಾರಂಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ, ಶ್ರೀ ಮಹಾಮ್ಮಾಯಿ ದೇವಸ್ಥಾನ, ಶ್ರೀ ಗುರುರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ಪ್ರತಿ ವರ್ಷವೂ ಸಂಕಷ್ಟ ಚತುರ್ಥಿಯ ದಿನದಂದೇ ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸಲಾಗುತ್ತಿದೆ.

ಸಮಿತಿಯ ಗೌರವಾಧ್ಯಕ್ಷ ಡಾ| ಎಂ.ಕೆ. ಪ್ರಸಾದ್‌ ಭಂಡಾರಿ, ಕಾರ್ಯಾಧ್ಯಕ್ಷ ಅರುಣ್‌ಕುಮಾರ್‌ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಜತೆ ಕಾರ್ಯದರ್ಶಿ ನೀಲಂತ್‌ಕುಮಾರ್‌, ವಿಗ್ರಹ ರಚನೆಕಾರ ಶ್ರೀನಿವಾಸ ಪ್ರಭು, ಸದಸ್ಯರಾದ ಸುಜೀಂದ್ರ ಪ್ರಭು, ದಯಾನಂದ, ಉದಯ ಎಚ್., ಗೋಪಾಲ ನಾೖಕ್‌, ಉದಯ, ಆದರ್ಶ್‌, ಪವಿತ್ರಾ ರೈ, ಮಲ್ಲೇಶ್‌ ಆಚಾರ್ಯ, ರಾಜೇಶ್‌ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here