Home ಧಾರ್ಮಿಕ ಸುದ್ದಿ ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಇಂದಿನಿಂದ

ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಇಂದಿನಿಂದ

2305
0
SHARE

ಪುತ್ತೂರು : ಧಾರ್ಮಿಕ ಸಂದ ರ್ಭದಲ್ಲಿ ಮಹತೋಭಾರ ಶ್ರೀ ಮಹಾ ಲಿಂಗೇಶ್ವರ ದೇವರು ಪುತ್ತೂರು ಸೀಮೆಯ ಒಡೆಯ. ಆದರೆ ಮಹಾಲಿಂಗೇಶ್ವರನ ಪ್ರಭಾವ ವಲಯ ಸೀಮಾತೀತ. ಸೀಮೆ ವ್ಯಾಪ್ತಿಯನ್ನೂ ಮೀರಿ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷ.

“ಪುತ್ತೂರª ಉಳ್ಳಾಯ’ ಎಂದು ಗೌರವಿ ಸಲ್ಪಡುವ ಶ್ರೀ ಮಹಾಲಿಂಗೇಶ್ವರನ ದೇವಾ ಲಯವು ಕೇವಲ 273 ದಿನಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಭಕ್ತ ಸಮುದಾ ಯದ ನಿತ್ಯ ಕರಸೇವೆಯ ಜತೆಗೆ ನಿರ್ಮಾಣಗೊಂಡಿರುವುದು ಒಂದು ಚರಿತ್ರೆ. ಈ ಕಾರಣದಿಂದಲೇ ಪುತ್ತೂರು ಜಾತ್ರೆ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿದೆ.

ಧಾರ್ಮಿಕ ಚರಿತ್ರೆ
ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಪ್ರತಿ ವರ್ಷ ಎ. 10ರಿಂದ 20ರ ತನಕ ನಡೆಯುತ್ತದೆ. ಈ 10 ದಿನಗಳ ಜಾತ್ರೆಯ ಸಂದರ್ಭ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸುವುದು ಮತ್ತು ವರ್ಷ ಕಳೆದಂತೆ ಕಟ್ಟೆಪೂಜೆ ಸೇವೆಗಳು ಮತ್ತಷ್ಟು ವಿಜೃಂಭಣೆ ಯಿಂದ ನಡೆಯುತ್ತಿರುವುದು ಪುತ್ತೂರು ಜಾತ್ರೆಯ ವಿಶೇಷತೆಗಳಲ್ಲಿ ಒಂದು. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ಪುತ್ತೂರಿನಲ್ಲಿ ಮಾತ್ರವಾಗಿದ್ದು, ಜಿಲ್ಲೆಯ ಮಟ್ಟಿಗೆ ಇದು ಧಾರ್ಮಿಕ ಚರಿತ್ರೆ.

ನಲ್ಕುರಿ ಸಂಪ್ರದಾಯ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ತುಳು ಪಂಚಾಂಗದಂತೆ ಹಿಂದಿನಿಂದಲೂ ನಿಗದಿತ ದಿನಗಳಂದೇ ನಡೆಯುತ್ತದೆ. ತುಳು ಧಾರ್ಮಿಕ ಸಂದರ್ಭ ಇದನ್ನು ನಲ್ಕುರಿ ಎಂದು ಕರೆಯಲಾಗುತ್ತದೆ. ನಲ್ಕುರಿ ಎಂದರೆ ವರ್ಷದ ನಿಗದಿತ ದಿನಗಳಂದೇ ಧಾರ್ಮಿಕ ಉತ್ಸವಗಳು ನಡೆಯುವ ಸಂಪ್ರದಾಯ ಎಂದರ್ಥ.

10 ದಿನಗಳ ಜಾತ್ರೆ
ಎ. 10ರಂದು ಧ್ವಜಾರೋಹಣ ದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ಎ. 14ರಂದು ದೇವಸ್ಥಾನ ದಲ್ಲಿ ವಿಷು ಕಣಿ ಉತ್ಸವ ವಿಶೇಷವಾಗಿ ನಡೆದು, ಅಂದು ರಾತ್ರಿ ಚಂದ್ರಮಂಡಲ ರಥೋತ್ಸವ ನಡೆಯುತ್ತದೆ. ಎ. 16ರಂದು ಹೊರಾಂಗಣದಲ್ಲಿ ಸಣ್ಣ ರಥೋತ್ಸವ, ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಇಂದು ಧ್ವಜಾರೋಹಣ
ಎ. 10ರಂದು ಪೂರ್ವಾಹ್ನ 9.54ರ ನಂತರ ವೃಷಭ ಲಗ್ನದಲ್ಲಿ ಜಾತ್ರಾ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ ದೇವಾಲಯದಲ್ಲಿ ಪ್ರಾರ್ಥನೆ ನಡೆದು ಅನಂತರ ದೇವರ ಬಲಿ ಉತ್ಸವ ಹೊರಡುತ್ತದೆ. ಬಳಿಕ ಧ್ವಜಸ್ತಂಭ ಪೂಜೆ ಹಾಗೂ ಧ್ವಜಾ ರೋಹಣ ನೆರವೇರುತ್ತದೆ. ದೇವಾಲ ಯದ ಧ್ವಜಸ್ತಂಭಕ್ಕೆ ಕಟ್ಟಲು ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ ಮೊದಲಾದ ಸುವಸ್ತುಗಳನ್ನು ಎ. 10ರಂದು ದೇವಾಲ ಯಕ್ಕೆ ತಂದು ಒಪ್ಪಿಸುತ್ತಾರೆ. ಧ್ವಜಾ ರೋಹಣದ ಬಳಿಕ ಸಂಜೆ ಸುವಸ್ತು ಗಳನ್ನು ಧ್ವಜಸ್ತಂಭದ ಕಟ್ಟೆಗೆ ಸುತ್ತಲೂ ಕಟ್ಟಲಾಗುತ್ತದೆ.

ಪೇಟೆ ಸವಾರಿ
ರಾತ್ರಿ ಅಂಕುರಾರ್ಪಣೆಯ ಬಳಿಕ ಶ್ರೀ ದೇವರ ಬಲಿ ಉತ್ಸವ ಹೊರಡುತ್ತದೆ. ಬಳಿಕ ಪೇಟೆ ಸವಾರಿಯು ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ತನಕ ತೆರಳಿ ತಡರಾತ್ರಿ ದೇವಾಲಯಕ್ಕೆ ತಲುಪಲಿದೆ.

LEAVE A REPLY

Please enter your comment!
Please enter your name here