Home ಧಾರ್ಮಿಕ ಸುದ್ದಿ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಸಮಾಪನ

ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಸಮಾಪನ

133
0
SHARE

ಪುತ್ತೂರು ಎ. 19: ಸೀಮೆಯ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಶುಕ್ರವಾರ ಬೆಳಗ್ಗೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು.

ಗುರುವಾರ ಸಂಜೆ 5 ಗಂಟೆಗೆ ದೇವಾಲಯದಿಂದ ತೆರಳಿದ ಶ್ರೀ ದೇವರ ಅವಭೃಥ ಸವಾರಿ ದಾರಿಯುದ್ದಕ್ಕೂ 50ಕ್ಕೂ ಹೆಚ್ಚು ಕಟ್ಟೆಪೂಜೆಗಳು, 5,000ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ವೀರಮಂಗಲಕ್ಕೆ ತೆರಳಿತ್ತು. ಶುಕ್ರವಾರ ಬೆಳಗ್ಗೆ 13 ಕಿ.ಮೀ. ದೂರದ ವೀರಮಂಗಲ ಕುಮಾರಧಾರಾ ನದಿಗೆ ತಲುಪಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು.

ಧ್ವಜಾವರೋಹಣ

ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು. ಬಳಿಕ ಭಕ್ತರು ದೇವರ ಧರ್ಮನಡೆಯಲ್ಲಿ ನಿಂತು ಪ್ರಾರ್ಥಿಸಿ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಧ್ವಜಾವರೋಹಣ ಮುಗಿದ ಬೆನ್ನಲ್ಲೇ ದೇವಾಲ ಯದಲ್ಲಿ ಅನ್ನಸಂತರ್ಪಣೆ ಆರಂಭವಾಯಿತು.

ಭಕ್ತರ ಭಕ್ತಿ

ಶ್ರೀ ದೇವರ ಸವಾರಿ ಮರಳಿ ಬರುವ ವೇಳೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ, ಭಕ್ತರಿಂದ ಶಿವ ನಾಮಸ್ಮರಣೆ ನಡೆಯಿತು. ಗುರುವಾರ ಸಂಜೆ ದೇವರೊಂದಿಗೆ ಅವಭೃಥ ಸ್ನಾನಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ನೂರಾರು ಭಕ್ತರು ವೀರಮಂಗಲ ಕುಮಾರಧಾರಾ ನದಿಯಲ್ಲಿ ಶ್ರೀ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಬಂದು ಪುನೀತರಾದರು. ಈ ಬಾರಿ ಅವಭೃಥಕ್ಕೆ ತೆರಳಿದ ಭಕ್ತರ ಸಂಖ್ಯೆ ಅಧಿಕವಾಗಿತ್ತು.

ಪೊಲೀಸ್‌ ನಿಗಾ

ಜಾತ್ರೆ ಆರಂಭದಿಂದ ಧ್ವಜಾವರೋಹಣದ ವರೆಗೆ ಪೊಲೀಸ್‌ ಸಿಬಂದಿ ನಿತ್ಯ ಬಂದೋಬಸ್ತ್ ನಡೆಸಿದರು. ಅವಭೃಥ ಸವಾರಿ ಉದ್ದಕ್ಕೂ ಹಾಗೂ ಸ್ನಾನದ ಬಳಿ ಭಕ್ತರು ಅಪಾಯಕಾರಿ ಸ್ಥಳದಲ್ಲಿ ನೀರಿಗೆ ಇಳಿಯದಂತೆ ಪೊಲೀಸರು ನಿಗಾ ವಹಿಸಿದರು.

ನಿರಂತರ ಅನ್ನಸಂತರ್ಪಣೆ

ದೇವಾಲಯದಲ್ಲಿ ಎ. 10ರಿಂದ 19ರ ತನಕ ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಸಲಾಗಿತ್ತು. ಸೀಮೆಯ ಭಕ್ತರು ದೇವರಿಗೆ ಹೊರೆಕಾಣಿಕೆಯಾಗಿ ಸಮರ್ಪಿಸಿದ ವಿವಿಧ ಸುವಸ್ತುಗಳನ್ನು ಅನ್ನಸಂತರ್ಪಣೆಯ ಕಾರ್ಯಕ್ಕಾಗಿ ಬಳಸಲಾಯಿತು.

ಶುಕ್ರವಾರ ಬೆಳಗ್ಗೆ ವೀರಮಂಗಲ ಕುಮಾರಧಾರ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ವಿವಿಧ ವಿಧಿ- ವಿಧಾನಗಳೊಂದಿಗೆ ನಡೆಯಿತು. ತುಪ್ಪ, ಜೇನು, ಸೀಯಾಳ ಸೇರಿದಂತೆ ಪಂಚ ದ್ರವ್ಯಗಳಿಂದ ಶ್ರೀ ದೇವರಿಗೆ ಅವಭೃಥ ಸ್ನಾನ ನೆರವೇರಿಸಲಾಯಿತು. ಶ್ರೀ ದೇವರ ಸ್ನಾನದ ಬಳಿಕ ಸಾವಿರಾರು ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದು ಪುನೀತರಾದರು. ಬಳಿಕ ಶ್ರೀ ದೇವರ ಪ್ರಭಾವಳಿಯೊಂದಿಗೆ ನದಿ ದಡದಲ್ಲಿ ರುವ ಕಟ್ಟೆಯಲ್ಲಿ ಪೂಜೆ ನಡೆದು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಶ್ರೀ ದೇವರ ಸವಾರಿ ಮರಳಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮರಳಿತು.
ದೇವರ ಸ್ನಾನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನ ವೀರಮಂಗಲ ಕುಮಾರಧಾರ ನದಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆಯಿತು. ಅವಭೃಥ ನಡೆದ ಬಳಿಕ ದೇವರೊಂದಿಗೆ ತೆರಳಿದ ಸೀಮೆಯ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡಿದರು.

LEAVE A REPLY

Please enter your comment!
Please enter your name here